ನವದೆಹಲಿ: ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ. ಆದರೆ, ಸಂಸತ್ ಕಲಾಪ ನಡೆಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಪೆಗಾಸಸ್ ಸ್ಪೈವೇರ್ ವಿಚಾರಕ್ಕೆ ಸಂಸತ್ ಕಲಾಪ ಬಲಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮುಂಬರುವ ಅಧಿವೇಶನದಲ್ಲಿ ಸಂಸತ್ತಿನ ಕಲಾಪಗಳನ್ನು ನಡೆಸಲು ಎರಡೂ ಕಡೆಯ (ಆಡಳಿತ- ಪ್ರತಿಪಕ್ಷ) ಎಲ್ಲಾ ಹಿರಿಯ ನಾಯಕರು ಒಟ್ಟಾಗಬೇಕು ಎಂದಿದ್ದಾರೆ.
ಪೆಗಾಸಸ್ ಸ್ಪೈವೇರ್ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಆರಂಭದಿಂದಲೂ ಗದ್ದಲ ಸೃಷ್ಟಿಸಿದ್ದರಿಂದ ಸಂಸತ್ನ ಮುಂಗಾರು ಅಧಿವೇಶನ ನಿಗದಿತ ಅವಧಿಗಿಂತ ಎರಡು ದಿನ ಮುಂಚೆಯೇ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಸಂಸತ್ ಭವನದಿಂದ ವಿಜಯ್ ಚೌಕ್ವರೆಗೆ ಪ್ರತಿಪಕ್ಷ ನಾಯಕರಿಂದ ಕಾಲ್ನಡಿಗೆ: ಕೇಂದ್ರದ ವಿರುದ್ಧ ಆಕ್ರೋಶ
ಮಂಗಳವಾರ ಮೇಲ್ಮನೆಯಲ್ಲಿ ಪೆಗಾಸಸ್ ವಿಚಾರವಾಗಿ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು. ಈ ವೇಳೆ ವರದಿಗಾರರ ಟೇಬಲ್ ಮೇಲೆ ಹತ್ತಿದ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಾಜ್ವಾ ಕಡತಗಳನ್ನು ಸಭಾಪತಿ ಪೀಠದತ್ತ ಎಸೆದರು. ಈ ವೇಳೆ ಪೀಠದಲ್ಲಿ ಸಭಾಪತಿ ಇರಲಿಲ್ಲ.