ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಸಮರ್ ಬ್ಯಾನರ್ಜಿ(92 ) ಅವರು ಶನಿವಾರ ಮುಂಜಾನೆ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಜು.27 ರಂದು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದರು ಎಂದು ಜನಪ್ರಿಯರಾಗಿದ್ದ ಇವರು 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದರು.
ಇದರಲ್ಲಿ ಭಾರತ ನಾಲ್ಕನೇ ಸ್ಥಾನ ಗಳಿಸಿತು. ಬ್ಯಾನರ್ಜಿ ಅವರು ಸುದೀರ್ಘ ವೃತ್ತಿಜೀವನದಲ್ಲಿ 7 ವರ್ಷಗಳ ಕಾಲ ಮೋಹನ್ ಬಗಾನ್ ಪರ ಆಡಿದ್ದರು. ಅಲ್ಲದೇ ಬಂಗಾಳ ತಂಡವನ್ನು ಸಂತೋಷ್ ಟ್ರೋಫಿ ಪ್ರಶಸ್ತಿಗಳಿಗೆ ಮಾರ್ಗದರ್ಶನ ಮಾಡಿದರು.
ಇದನ್ನೂ ಓದಿ: ಮಹಾರಾಜ ಟ್ರೋಫಿ ಕ್ರಿಕೆಟ್ 2022.. ಅಂದು ಬಾಲ್ ಬಾಯ್.. ಇಂದು ಹೊಸ ಬ್ಯಾಟಿಂಗ್ ಬಾಯ್.. ಎಲ್ಆರ್ ಚೇತನ್ ಯಾರು