ETV Bharat / bharat

ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಏಪ್ರಿಲ್ 1 ರಂದು ಜೈಲಿನಿಂದ ಬಿಡುಗಡೆ ಸಾಧ್ಯತೆ? - ಆಮ್ ಆದ್ಮಿ ಪಕ್ಷ ನೇತೃತ್ವದ ರಾಜ್ಯ ಸರ್ಕಾರ

1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ನೀಡಿದ ಶಿಕ್ಷೆ ಪ್ರಕಾರ ನವಜೋತ್ ಸಿಧು ಅವರು ಮೇ 19, 2023ರ ವರೆಗೆ ಜೈಲಿನಲ್ಲಿ ಇರಬೇಕು. ಜೈಲಿಗೆ ಸೇರಿದ ಬಳಿಕ ಸಿಧು ಒಂದು ರಜೆಯನ್ನೂ ಸಹ ಪಡೆದಿಲ್ಲ. ಹೀಗಾಗಿ ಏಪ್ರಿಲ್ 1 ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಚರ್ಚೆ ಆಗುತ್ತಿದೆ.

Former MP Navjot Singh Sidhu
ಮಾಜಿ ಸಂಸದ ನವಜೋತ್ ಸಿಂಗ್ ಸಿಧು
author img

By

Published : Mar 17, 2023, 6:08 PM IST

ಚಂಡೀಗಢ( ಪಂಜಾಬ್​​​):1988ರ ರೋಡ್ ರೇಜ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಮಾಜಿ ಸಂಸದ ಮತ್ತು ಪಂಜಾಬ್ ಕಾಂಗ್ರೆಸ್‌ನ ಮುಖಂಡ ನವಜೋತ್ ಸಿಂಗ್ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷಿ ವಿಧಿಸಿತು. ಪಟಿಯಾಲ ಜೈಲಿನಲ್ಲಿ ಒಂದು ವರ್ಷದ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು ವಿವಿಧ ಮೂಲಗಳ ಪ್ರಕಾರ ಏಪ್ರಿಲ್ 1 ರಂದು ಬಿಡುಗಡೆಯಾಗಬಹುದು ಚರ್ಚೆ ನಡೆಯುತ್ತಿದೆ.

ನ್ಯಾಯಾಲಯ ನೀಡಿದ ಶಿಕ್ಷೆ ಪ್ರಕಾರ ನವಜೋತ್ ಸಿಧು ಅವರು ಮೇ 19, 2023 ರ ವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ. ಆದರೆ, ಜೈಲಿನ ನಿಯಮದ ಪ್ರಕಾರ ನವಜೋತ್ ಸಿಂಗ್ ಸಿಧು ಅವರನ್ನು ಸಮಯಕ್ಕಿಂತ ಮುಂಚಿತ ಬಿಡುಗಡೆ ಮಾಡಬಹುದು. ಹಿಂದಿನ ವರ್ಷ ಮೇ 20 2022 ರಂದು ಜೈಲಿಗೆ ಹೋದ ನಂತರ ಸಿಧು ಒಂದು ರಜೆಯನ್ನೂ ಸಹ ಪಡೆದಿಲ್ಲ. ಸರ್ಕಾರಿ ರಜಾದಿನದ ಜತೆಗೆ ಅವರು ಜೈಲಿನಲ್ಲಿ ಲಭ್ಯವಿರುವ ವಾರದ ಒಂದು ದಿನ ರಜೆಯನ್ನೂ ತೆಗೆದುಕೊಂಡಿಲ್ಲ. 12 ತಿಂಗಳಲ್ಲಿ 48 ರಜೆಗಳನ್ನು ಸಿಧು ತೆಗೆದುಕೊಳ್ಳಬೇಕಿತ್ತು. ಆದರೆ, ಈ ರಜಾ ದಿನಗಳನ್ನು ಅವರ ಶಿಕ್ಷೆಯ ದಿನಗಳಲ್ಲಿ ಸೇರ್ಪಡೆಗೊಳಿಸಿದರೆ ಅವರನ್ನು ಏಪ್ರಿಲ್ 1 ರಂದು ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರದಿಂದ ಸಿಗದ ಕ್ಷಮಾದಾನ: ಜನವರಿ 26ರ ಸಂದರ್ಭದಲ್ಲೂ ಸಿಧು ಅವರ ಶಿಕ್ಷೆಯನ್ನು ಕ್ಷಮಾದಾನ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಪಂಜಾಬ್‌ನ ಆಮ್ ಆದ್ಮಿ ನೇತೃತ್ವದ ರಾಜ್ಯ ಸರ್ಕಾರ ಕ್ಷಮಾದಾನ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿರಲಿಲ್ಲ. ಇದರಿಂದಾಗಿ ಜನವರಿ 26 ರಂದು ನವಜೋತ್ ಸಿಂಗ್ ಸಿಧು ಜೈಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ.

ಏನಿದು ರೋಜ್ ರೇಜ್ ಪ್ರಕರಣ?: ನವಜೋತ್ ಸಿಧು ಅವರು ಪಟಿಯಾಲಾದಲ್ಲಿ ಪಾರ್ಕಿಂಗ್ ಜಾಗದ ಬಗ್ಗೆ ವ್ಯಕ್ತಿಯೊಂದಿಗೆ ಜಗಳವಾಡಿದ್ದರು. ಸಿಧು ಹಾಗೂ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಸೇರಿ 65 ವರ್ಷದ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಗೆ ಮಾರಣಾಂತಿಕವಾಗಿ ಥಳಿಸಿದ್ದರು. ಗುರ್ನಾಮ್ ಸಿಂಗ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು.

ಪ್ರಕರಣದ ವಿವರ : ಸಿಧು ಡಿಸೆಂಬರ್ 27 1988 ರಂದು ಪಟಿಯಾಲಾದ ಶೆರಾವಾಲೆ ಮಾರುಕಟ್ಟೆಯಲ್ಲಿ ನವಜೋತ್ ಸಿಂಗ್ ಸಿಧು ಹಾಗೂ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರು ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ 65 ವರ್ಷದ ಗುರ್ನಾಮ್ ಸಿಂಗ್ ಜತೆ ವಾಗ್ವಾದ ನಡೆಸಿದ್ದರು. ಈ ವಾಗ್ವಾದ ವಿಕೋಪಕ್ಕೆ ತಿರುಗಿತು. ಈ ವೇಳೆ ನವಜೋತ್ ಸಿಂಗ್ ಸಿಧು ಅವರು ಗುರ್ನಾಮ್ ಸಿಂಗ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಗುರ್ನಾಮ್ ಸಿಂಗ್​, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪಟಿಯಾಲ ಪೊಲೀಸರು ಸಿಧು ವಿರುದ್ಧ ಕೊಲೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು.

ನಂತರ ಸೆಪ್ಟೆಂಬರ್ 22, 1999 ರಂದು ರೋಡ್ ರೇಜ್ ಪ್ರಕರಣವನ್ನು ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಈ ಪ್ರಕರಣದಿಂದ ಸಿಧು ಮತ್ತು ರೂಪಿಂದರ್ ಅವರನ್ನು ಖುಲಾಸೆಗೊಳಿಸಲಾಗಿತ್ತು. 2002 ರಲ್ಲಿ ಗುರ್ನಾಮ್ ಸಿಂಗ್​ ಸಂತ್ರಸ್ತರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸಿ, 2006 ರಲ್ಲಿ ಇಬ್ಬರೂ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇಬ್ಬರಿಗೂ ತಲಾ ಮೂರು ವರ್ಷಗಳ ಶಿಕ್ಷೆ ಮತ್ತು ತಲಾ 1 ಲಕ್ಷ ರೂ ದಂಡ ವಿಧಿಸಿ ಜೈಲು ಶಿಕ್ಷೆ ಘೋಷಿಸಿತು. ಮತ್ತೆ ಈ ಪ್ರಕರಣ 2007ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ದಿವಂಗತ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಸಿಧು ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಇಬ್ಬರನ್ನೂ ಖುಲಾಸೆಗೊಳಿಸಿದ್ದ ಸುಪ್ರೀಂ ಕೋರ್ಟ್ ಸಿಧುಗೆ 1000 ರೂಪಾಯಿ ದಂಡ ವಿಧಿಸಿತ್ತು. ಈ ಸಮಯದಲ್ಲಿ ಸಿಧು ಬಿಜೆಪಿ ಟಿಕೆಟ್‌ನಲ್ಲಿ ಅಮೃತಸರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಂಸತ್ ಸದಸ್ಯರಾಗಿದ್ದರು. ಸೆಪ್ಟೆಂಬರ್ 2018 ರಲ್ಲಿ ಗುರ್ನಾಮ್ ಅವರ ಕುಟುಂಬವು ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆಮೇಲೆ ಸಿಧುಗೆ ಸುಪ್ರೀಂ ಕೋರ್ಟ್​ ಅರ್ಜಿ ವಿಚಾರಣೆ ನಡೆಸಿ, ಮೇ 19 2022 ರಂದು 1 ವರ್ಷ ಶಿಕ್ಷೆ ವಿಧಿಸಿತ್ತು.

ಈ ವೇಳೆ ಸಿಧು ಪರ ವಾದ ಮಂಡಿಸಿದ ಹಿರಿಯ ವಕೀಲ ಎಎಂ ಸಿಂಘ್ವಿ ಅವರು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಎದುರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ್ದರು. ಮಾಜಿ ಕ್ರಿಕೆಟಿಗ ಶರಣಾಗಲು ಕೆಲವು ವಾರಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಸಿಧು ಪರ ವಕೀಲರು ಸಿಧು ಅವರ ಅನಾರೋಗ್ಯವನ್ನು ಉಲ್ಲೇಖಿಸಿದ್ದರು. ತಕ್ಷಣವೇ ಕ್ಯುರೇಟಿವ್ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅನಿವಾರ್ಯವಾಗಿ ಸಿಧು ಕೋರ್ಟ್​ಗೆ ಶರಣಾಗಿದ್ದರು. ಈ ವೇಳೆ ಸಿದ್ದು ಯಾರೊಂದಿಗೂ ಮಾತನಾಡಿರಲಿಲ್ಲ.

ಇದನ್ನೂಓದಿ:ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.