ಮಧುರೈ(ತಮಿಳುನಾಡು) : ಕೋವಿಡ್ ಬಿಕ್ಕಟ್ಟಿನ ನಡುವೆಯೂ ಮಾಜಿ ಶಾಸಕರೊಬ್ಬರ ಪುತ್ರಿಯ ಅದ್ದೂರಿ ವಿವಾಹದ ಫೋಟೋಗಳು ವೈರಲ್ ಆಗಿವೆ.
ಮಧುರೈನಲ್ಲಿ ನಡೆದ ಮಾಜಿ ಶಾಸಕ ತಮಿಳರಸು ಪುತ್ರಿಯ ವಿವಾಹ ಸಮಯದಲ್ಲಿ ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾದ ವಸ್ತುಗಳ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ.
ಮದುವೆ ಸಭಾಂಗಣದ ಒಂದು ಭಾಗದಲ್ಲಿ ಪ್ಲಾಸ್ಟಿಕ್, ಬೆಳ್ಳಿ ಮತ್ತು ಚಿನ್ನದ ಪಾತ್ರೆಗಳು, ಟಿವಿ, ಮಿಕ್ಸರ್ಗಳು, ಎಲೆಕ್ಟ್ರಾನಿಕ್ ವಸ್ತುಗಳು, ದ್ವಿಚಕ್ರ ವಾಹನ, ಕಾರು ಮತ್ತು ಟ್ರ್ಯಾಕ್ಟರ್ಗಳನ್ನು ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ವಸ್ತುಗಳ ಮೌಲ್ಯ ಎರಡು ಕೋಟಿ ರೂಪಾಯಿಗೂ ಹೆಚ್ಚಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮದುವೆಗೆ ಬಂದವರು ಮಾತ್ರವಲ್ಲ, ಜಾಲತಾಣದಲ್ಲಿ ಈ ವೈಭವವನ್ನು ಕಂಡವರು ಮೂಕವಿಸ್ಮಿತರಾಗಿದ್ದಾರೆ.