ETV Bharat / bharat

Viveka murder case: ಅವಿನಾಶ್, ಭಾಸ್ಕರ್ ರೆಡ್ಡಿ ಸೂಚನೆ ಮೇರೆಗೆ ಸಂಚು: ಸಿಬಿಐ

author img

By

Published : Jun 9, 2023, 9:32 AM IST

Viveka murder case update: ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಅವಿನಾಶ್ ರೆಡ್ಡಿ ಹಾಗೂ ಭಾಸ್ಕರ್ ರೆಡ್ಡಿ ಸೂಚನೆ ಮೇರೆಗೆ ಸಂಚು ನಡೆದಿದೆ. ಅಂದು ಬೆಳಗ್ಗೆ 6.30ಕ್ಕೆ ಮುನ್ನವೇ ಜಗನ್​ಗೆ ವಿವೇಕ ಹತ್ಯೆ ವಿಷಯ ಗೊತ್ತಿತ್ತು- ಸಿಬಿಐ ತನಿಖೆಯಲ್ಲಿ ಪ್ರಮುಖ ವಿಚಾರಗಳು ಬಹಿರಂಗ.

Viveka murder case update
ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಸಚಿವ ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಅವರನ್ನು ಸಿಬಿಐ 8ನೇ ಆರೋಪಿಯನ್ನಾಗಿ ಮಾಡಿದೆ. ಈಗಾಗಲೇ ಬಂಧಿತರಾಗಿರುವ ವೈ ಎಸ್ ಭಾಸ್ಕರ್​ ರೆಡ್ಡಿ ಅವರನ್ನು 7ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಮೌಖಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಗಳ ಪ್ರಕಾರ ಗಂಗಿರೆಡ್ಡಿ, ಸುನೀಲ್ ಯಾದವ್, ಉಮಾಶಂಕರ್ ರೆಡ್ಡಿ, ಮತ್ತು ದಸ್ತಗಿರಿ ಎಂಬುವರು ಕೊಲೆ ಯೋಜನೆ ರೂಪಿಸಿ ಸಾಕ್ಷ್ಯ ನಾಶಪಡಿಸಿ ವಿವೇಕಾನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿ ಭಾಸ್ಕರ್​ ರೆಡ್ಡಿ ನಂಬಿಸಿದ್ದರು. ಅವಿನಾಶ್ ರೆಡ್ಡಿ, ಆರೋಪಿಗಳಾದ ಶಿವಶಂಕರರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿ ಸೇರಿ ಈ ಸಂಚು ರೂಪಿಸಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ವಿವೇಕಾನಂದ ಹತ್ಯೆಯ ಹಿಂದೆ ಭಾಸ್ಕರ್​ ರೆಡ್ಡಿ ಮತ್ತು ಅವರ ಪುತ್ರ ಅವಿನಾಶ್ ರೆಡ್ಡಿ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಹೇಳಿದೆ. ವಿವೇಕಾನಂದ ಅವರ ಸಾವಿನ ಸುದ್ದಿಯನ್ನು ಅವರ ಆಪ್ತ ಸಹಾಯಕ ಎಂವಿ ಕೃಷ್ಣಾ ರೆಡ್ಡಿ ಅವರು ಬೆಳಗ್ಗೆ 6.15 ಕ್ಕೆ ಬಹಿರಂಗಪಡಿಸುವ ಮೊದಲೇ ಪ್ರಸ್ತುತ ಎಪಿ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ ಅವರಿಗೆ ತಿಳಿದಿತ್ತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.

ಜಾಮೀನು ನೀಡಿದರೆ ತನಿಖೆಗೆ ಅಡ್ಡಿ: ಭಾಸ್ಕರ್ ರೆಡ್ಡಿ ಸಹ ಆರೋಪಿಗಳ ಜತೆ ಸೇರಿ ಪಿತೂರಿ ಮತ್ತು ಸಾಕ್ಷ್ಯ ನಾಶದಲ್ಲಿ ಪಾಲ್ಗೊಂಡಿರುವುದು ಬಯಲಾಗಿದೆ. ಕಡಪ ಜಿಲ್ಲೆಯಲ್ಲಿ ಅದರಲ್ಲೂ ಪುಲಿವೆಂದುಲದಲ್ಲಿ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಲ್ಲರು ಎನ್ನಲಾಗಿದೆ. ಸಾಕ್ಷಿಗಳನ್ನು ಬೆದರಿಸುವ ಹಾಗೂ ಇತರ ಆರೋಪಿಗಳ ಜತೆ ಸೇರಿ ತನಿಖೆಯ ಹಾದಿ ತಪ್ಪಿಸುವ ಯತ್ನದ ಹಲವು ನಿದರ್ಶನಗಳು ಬಹಿರಂಗವಾಗಿವೆ. ಅವರ ಬಂಧನದ ಸಂದರ್ಭದಲ್ಲಿ ಕಡಪ ಭಾಗದಲ್ಲಿ ನಡೆದ ಪ್ರತಿಭಟನೆಗಳು ಅವರ ಖ್ಯಾತಿಯನ್ನು ಹೇಳುತ್ತವೆ. ಅವರ ಉಪಸ್ಥಿತಿಯು ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಈ ಹಂತದಲ್ಲಿ ಜಾಮೀನು ನೀಡಿದರೆ, ತನಿಖೆಗೆ ತೀವ್ರ ಅಡ್ಡಿಯಾಗಲಿದೆ ಎಂದು ಸಿಬಿಐ ಆತಂಕ ವ್ಯಕ್ತಪಡಿಸಿದೆ.

ಈ ಆರೋಪಗಳ ವಿರುದ್ಧ ಶಿವಶಂಕರರೆಡ್ಡಿ ಸಲ್ಲಿಸಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಷರತ್ತುಗಳೊಂದಿಗೆ ಜಾಮೀನು ನೀಡಿದರೂ ಯಾವುದೇ ಫಲವಿಲ್ಲ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ಸಾಕ್ಷ್ಯಗಳನ್ನು ತಿರುಚಿದರೆ ತನಿಖೆಗೆ ತೀವ್ರ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಭಾಸ್ಕರ ರೆಡ್ಡಿ ಅವರು ತನಿಖೆಗೆ ಸಹಕರಿಸಿಲ್ಲ, ಏಪ್ರಿಲ್ 16ರಿಂದ ಜೈಲಿನಲ್ಲಿರುವಷ್ಟು ಕಾಲ ಜಾಮೀನು ನೀಡುವುದು ಸೂಕ್ತವಲ್ಲ. ಎಲ್ಲ ಅಂಶಗಳನ್ನು ಪರಿಗಣಿಸಿ ಭಾಸ್ಕರ್​ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಸಿಬಿಐ ಕೋರಿತ್ತು.

ಜಾಮೀನಿಗೆ ಸುನೀತಾ ವಿರೋಧ: ವೈಎಸ್ ಭಾಸ್ಕರ್​ ರೆಡ್ಡಿಗೆ ಜಾಮೀನು ನೀಡದಂತೆ ಸುನೀತಾ ಮನವಿ ಮಾಡಿದರು. ವಿವೇಕಾನಂದ ಹತ್ಯೆ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷಿಗಳು ಮತ್ತು ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ತನ್ನ ಲಿಖಿತ ವಾದದಲ್ಲಿ, ಭಾಸ್ಕರ್​ ರೆಡ್ಡಿ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹಲವಾರು ಜನರು ನೀಡಿದ ಹೇಳಿಕೆಗಳನ್ನು ಅವರು ಉಲ್ಲೇಖಿಸಿದ್ದಾರೆ.

ಇಂದು ಜಾಮೀನು ಅರ್ಜಿಯ ತೀರ್ಪು: ವಿವೇಕಾನಂದ ಹತ್ಯೆ ಪ್ರಕರಣದ ಆರೋಪಿಗಳಾದ ಭಾಸ್ಕರ್ ರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿ ಅವರನ್ನು ಸಿಬಿಐ ಗುರುವಾರ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿತು. ನ್ಯಾಯಾಲಯ ಅವರ ಬಂಧನವನ್ನು ಜೂ. 16ರವರೆಗೆ ವಿಸ್ತರಿಸಿದೆ. ಮತ್ತೊಂದೆಡೆ ಭಾಸ್ಕರ್​ ರೆಡ್ಡಿ ಅವರ ಜಾಮೀನು ಅರ್ಜಿಯ ತೀರ್ಪನ್ನು ಸಿಬಿಐ ಕೋರ್ಟ್ ಇಂದು ಪ್ರಕಟಿಸಲಿದೆ.

ಇದನ್ನೂ ಓದಿ: ಮಾಜಿ ಸಚಿವ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣ: ಜಾಮೀನು ನೀಡದಂತೆ ಸಿಬಿಐ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.