ಶ್ರೀನಗರ, ಜಮ್ಮು ಕಾಶ್ಮೀರ : ಹವಾಲಾ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಾಜಿ ಸಚಿವರೊಬ್ಬರನ್ನು ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಸಾರ್ವಜನಿಕವಾಗಿ ಬಾಬು ಸಿಂಗ್ ಎಂದೇ ಹೆಚ್ಚು ಪರಿಚಿತರಾಗಿರುವ ಜಿತೇಂದರ್ ಸಿಂಗ್ ಬಂಧಿತ ಮಾಜಿ ಸಚಿವರಾಗಿದ್ದಾರೆ.
ಕಳೆದ ತಿಂಗಳು ಜಮ್ಮುವಿನಲ್ಲಿ ಅಪಾರ ಪ್ರಮಾಣದ ನಗದು ಹಣದೊಂದಿಗೆ ಕಾಶ್ಮೀರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಅದೇ ವ್ಯಕ್ತಿ ಬಾಬು ಸಿಂಗ್ ಜೊತೆ ಸಂಪರ್ಕ ಹೊಂದಿರುವ ಹವಾಲಾ ಗ್ಯಾಂಗ್‌ನ ಭಾಗವಾಗಿದ್ದ ಎಂದು ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಬು ಸಿಂಗ್ ಅವರನ್ನು ಬಂಧಿಸಲಾಗಿದೆ.
ಕಳೆದ ತಿಂಗಳಿಂದ ಬಾಬು ಸಿಂಗ್ ತಲೆಮರೆಸಿಕೊಂಡಿದ್ದರು. ಆತನನ್ನು ಹಿಡಿಯಲು ಪೊಲೀಸರು ವಿವಿಧೆಡೆ ದಾಳಿ ನಡೆಸಿದ್ದರು. ಕಥುವಾದಲ್ಲಿ ಇರುವ ನಿಖರ ಮಾಹಿತಿ ಸಿಕ್ಕಿದ ನಂತರ ಅಂತಿಮವಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈಗ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇಮ್ರಾನ್ಖಾನ್ಗೆ ಭಾರತ ಇಷ್ಟವಿದ್ದರೆ, ಪಾಕ್ ತೊರೆಯಲಿ: ಮರ್ಯಮ್ ಖಾನ್