ಸೂರತ್(ಗುಜರಾತ್) : ಚಂದ್ರಯಾನ -2 ರ ನಂತರ ಗಗನಯಾನ ಇಸ್ರೋದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕಾಗಿ ಭಾರತವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇಸ್ರೋ 2022ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನ ಮಿಷನ್ ಪ್ರಾರಂಭಿಸಲಿದ್ದು, ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಮೊದಲು ಯೋಜನೆಗೆ ಅಗತ್ಯವಾದ ಇಂಜಿನ್ ತಂತ್ರಜ್ಞಾನವನ್ನು ರಷ್ಯಾ ನೀಡಬೇಕಿತ್ತು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಭಾರತಕ್ಕೆ ಈ ತಂತ್ರಜ್ಞಾನ ನೀಡಿರಲಿಲ್ಲ.
ಬಳಿಕ ಕ್ರಯೋಜೆನಿಕ್ ಇಂಜಿನ್ ತಂತ್ರಜ್ಞಾನವನ್ನು ಇಸ್ರೋದ ಮಾಜಿ ವಿಜ್ಞಾನಿ ಎನ್.ಕೆ.ಗುಪ್ತಾ ಹಾಗೂ ಅವರ ತಂಡ ಅಭಿವೃದ್ಧಿಪಡಿಸಿದೆ. ವಿಶ್ವದ ಅನೇಕ ದೇಶಗಳು ಕ್ರಯೋಜೆನಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಇದೀಗ ಭಾರತವು ಅದರಲ್ಲಿ ಸ್ಥಾನ ಪಡೆದಿದೆ.
ಇನ್ನು ಗಗನಯಾನ ಯೋಜನೆ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನದ ಕುರಿತಂತೆ ಇಸ್ರೋದ ಮಾಜಿ ವಿಜ್ಞಾನಿ ಹಾಗೂ ಕ್ರಯೋಜೆನಿಕ್ ತಂತ್ರಜ್ಞಾನದ ಪ್ರಾಜೆಕ್ಟ್ ಹೆಡ್ ಎನ್.ಕೆ.ಗುಪ್ತಾ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವರ್ಷದ ನಂತರ ಮನೆಯತ್ತ ಮುಖ ಮಾಡಿದ ಅನ್ನದಾತರು.. ವಿಮಾನದ ಮೂಲಕ ಹೂವುಗಳ ಸುರಿಮಳೆ!