ನವದೆಹಲಿ : ಟೀಂ ಇಂಡಿಯಾ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು ಇಂದು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರ ಜೊತೆಗೆ ಸಾಮಾಜಿಕ ಕಾರ್ಯಕರ್ತ ಅರವಿಂದ್ ಚಂದೇಲಾ ಕೂಡ ಆಪ್ ಸೇರ್ಪಡೆಯಾಗಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ, ಮಾಳವೀಯ ನಗರದ ಶಾಸಕ ಸೋಮನಾಥ್ ಭಾರ್ತಿ ಅವರು ಪಕ್ಷದ ಕ್ಯಾಪ್ ಮತ್ತು ಬಾವುಟ ನೀಡಿ ಬರಮಾಡಿಕೊಂಡರು.
-
Delhi: Anju Sehwag, sister of former cricketer Virender Sehwag, joins Aam Aadmi Party (AAP) pic.twitter.com/pyypeNGrwe
— ANI (@ANI) December 31, 2021 " class="align-text-top noRightClick twitterSection" data="
">Delhi: Anju Sehwag, sister of former cricketer Virender Sehwag, joins Aam Aadmi Party (AAP) pic.twitter.com/pyypeNGrwe
— ANI (@ANI) December 31, 2021Delhi: Anju Sehwag, sister of former cricketer Virender Sehwag, joins Aam Aadmi Party (AAP) pic.twitter.com/pyypeNGrwe
— ANI (@ANI) December 31, 2021
ಈಟಿವಿ ಭಾರತ್ ಜೊತೆ ಮಾತನಾಡಿದ ಅಂಜು ಸೆಹ್ವಾಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯದಿಂದ ಪ್ರಭಾವಿತರಾಗಿ ಎಎಪಿ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಎಎಪಿ ಅದ್ಭುತ ಕೆಲಸ ಮಾಡ್ತಿದ್ದು, ಅದರಿಂದ ನಾನು ಪ್ರಭಾವಿತಳಾಗಿದ್ದೇನೆ. ದೆಹಲಿ ಸಿಎಂ ಕೇಜ್ರಿವಾಲ್ ಅವರು ನಮ್ಮೆಲ್ಲರ ಮೇಲೆ ಪ್ರಭಾವ ಬೀರುವ ಅನೇಕ ಕೆಲಸ ಮಾಡಿದ್ದಾರೆ. ಈ ಎಲ್ಲ ಬದಲಾವಣೆ ಗಮನದಲ್ಲಿಟ್ಟುಕೊಂಡು ಆಮ್ ಆದ್ಮಿ ಪಕ್ಷದ ಸದಸ್ಯತ್ವ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ರಾಜ್ಯದಲ್ಲಿ ಒಮಿಕ್ರಾನ್ ಅಬ್ಬರ.. 23 ಹೊಸ ಸೋಂಕಿತರು ಪತ್ತೆ..
2012ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಂಜು ಸೆಹ್ವಾಗ್, ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಾಲಿಕೆ ಸದಸ್ಯೆಯಾಗಿದ್ದರು. ಇದಕ್ಕೂ ಮೊದಲು ಖಾಸಗಿ ಶಾಲೆವೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.