ETV Bharat / bharat

ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್​ ಸಿಂಗ್​ ಸ್ಥಿತಿ ಗಂಭೀರ.. ಆಸ್ಪತ್ರೆಗೆ ಸಿಎಂ ಯೋಗಿ ದೌಡು..

author img

By

Published : Aug 20, 2021, 4:08 PM IST

ಕಲ್ಯಾಣ್ ಸಿಂಗ್ ಹಲವು ತಿಂಗಳುಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಿಜಿಐ ಲಖನೌದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಸಿಂಗ್ ಅವರಿಗೆ ಲಖನೌನ ಆರ್​ಎಮ್​ಎಲ್ ಇನ್ಸ್‌ಟಿಟ್ಯೂಟ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು..

ಕಲ್ಯಾಣ್​ ಸಿಂಗ್​
ಕಲ್ಯಾಣ್​ ಸಿಂಗ್​

ಲಖನೌ(ಉತ್ತರಪ್ರದೇಶ): ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಸ್‌ಜಿಪಿಜಿಐ)ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸ್ಥಿತಿ ಗಂಭೀರವಾಗಿದೆ. ಕಳೆದ 51 ದಿನಗಳಿಂದ ಕಲ್ಯಾಣ್​ಸಿಂಗ್​ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲ್ಯಾಣ್‌ ಸಿಂಗ್ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆ ಇಂದು ಸಿಎಂ ಯೋಗಿ ಆದಿತ್ಯನಾಥ್ ಆಸ್ಪತ್ರೆಗೆ ಭೇಟಿ ನೀಡಿ, ಕಲ್ಯಾಣ್​ಸಿಂಗ್​ರನ್ನು ನೋಡಿದ್ದಾರೆ. ಬಳಿಕ ಸಿಎಂ, ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

ಕಲ್ಯಾಣ್ ಸಿಂಗ್ ಹಲವು ತಿಂಗಳುಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಿಜಿಐ ಲಖನೌದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಸಿಂಗ್ ಅವರಿಗೆ ಲಖನೌನ ಆರ್​ಎಮ್​ಎಲ್ ಇನ್ಸ್‌ಟಿಟ್ಯೂಟ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಅವರನ್ನು ಪಿಜಿಐಗೆ ವರ್ಗಾಯಿಸಲಾಯಿತು.

ಇದನ್ನೂ ಓದಿ: ತಂದೆ ಚಿತೆಗೆ ಕೊಳ್ಳಿ ಇಡಲು ನಿರಾಕರಿಸಿದ ಪುತ್ರ.. ಕಣ್ಣಲ್ಲಿ ನೀರು ತುಂಬಿಕೊಂಡು ಮುಂದೆ ಬಂದಳು 10ರ ಪುತ್ರಿ

ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಚಿಕಿತ್ಸೆಗಾಗಿ, ವೈದ್ಯಕೀಯ ತಜ್ಞರ ತಂಡ ರಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.