ನವದೆಹಲಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಅವಿಭಜಿತ ಆಂಧ್ರಪ್ರದೇಶದ ಕೊನೆಯ ಸಿಎಂ ಕೂಡ ಆಗಿದ್ದರು. ಮಾರ್ಚ್ 11 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪತ್ರ ಬರೆದ ರೆಡ್ಡಿ, "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಈ ಪತ್ರವನ್ನು ಸ್ವೀಕರಿಸಿ" ಎಂದು ಮನವಿ ಮಾಡಿದ್ದರು.
ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವಾಗಿವ ಅಂದಿನ ಯುಪಿಎ ಸರ್ಕಾರದ ನಿರ್ಧಾರದವನ್ನು ವಿರೋಧಿಸಿ 2014 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಬಳಿಕ ತಮ್ಮದೇ ಆದ ರಾಜಕೀಯ ಸಂಘಟನೆ 'ಜೈ ಸಮೈಕ್ಯಂಧ್ರ ಪಕ್ಷ' ಕಟ್ಟಿದ್ದರು. ನೂತನ ಪಕ್ಷ ಕಟ್ಟಿದ ಕೆಲವೇ ವರ್ಷಗಳಲ್ಲಿ ಅಂದ್ರೆ 2018ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದರು. ಇದೀಗ ಮತ್ತೆ ಕಾಂಗ್ರೆಸ್ ತೊರೆದಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ಮಾಣಿಕಂ ಠಾಗೋರ್, "ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು, ಆಂಧ್ರಪ್ರದೇಶ ಕಾಂಗ್ರೆಸ್ ಅನ್ನು ಮುಗಿಸಿದವರು ಈಗ ಬಿಜೆಪಿಗೆ ಹೋಗುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ಪ್ರಾರಂಭದಲ್ಲೇ ವಿರೋಧ: ರಾಜಾಜಿನಗರ ಟಿಕೆಟ್ ಆಕಾಂಕ್ಷಿ ಮನೋಹರ್ ಪ್ರತಿಭಟನೆ
ಎಂಎಲ್‌ಸಿ ಚುನಾವಣೆ: ಇಂದು ರಾಜ್ಯದ ಮೂರು ಪದವೀಧರ ಕ್ಷೇತ್ರಗಳು, ಎರಡು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯದ ಎಂಟು ಎಂಎಲ್‌ಸಿ ಸ್ಥಾನಗಳಿಗೆ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. 3 ಪದವೀಧರ ಸ್ಥಾನಗಳಿಗೆ 108 ಅಭ್ಯರ್ಥಿಗಳು, 2 ಶಿಕ್ಷಕರ ಸ್ಥಾನಕ್ಕೆ 20 ಅಭ್ಯರ್ಥಿಗಳು ಮತ್ತು 3 ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ 11 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮಾಕೇಶ್‌ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಯಾವ ಯಾವ ಕ್ಷೇತ್ರದಲ್ಲಿ ಚುನಾವಣೆ: ಮೂರು ಪದವೀಧರ ಕ್ಷೇತ್ರಗಳಿಗೆ ಶ್ರೀಕಾಕುಳಂ-ವಿಜಯನಗರಂ-ವಿಶಾಖಪಟ್ಟಣಂ, ಪ್ರಕಾಶಂ-ನೆಲ್ಲೂರು-ಚಿತ್ತೂರು, ಕಡಪ-ಅನಂತಪುರ-ಕರ್ನೂಲ್ನಲ್ಲಿ ಮತದಾನ ನಡೆದರೆ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಪ್ರಕಾಶಂ-ನೆಲ್ಲೂರು-ಚಿತ್ತೂರು, ಕಡಪ-ಅನಂತಪುರ-ಕರ್ನೂಲ್ನಲ್ಲಿ ಚುನಾವಣೆ ನಡೆಯುತ್ತಿದೆ. ಹಾಗೆಯೇ, ಸ್ಥಳೀಯ ಸಂಸ್ಥೆಗಳಿಗೆ ಶ್ರೀಕಾಕುಳಂ, ಪಶ್ಚಿಮ ಗೋದಾವರಿ, ಕರ್ನೂಲ್ನಲ್ಲಿ ಇಂದು ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅನಂತಪುರ, ಕಡಪ, ನೆಲ್ಲೂರು, ಪೂರ್ವ ಗೋದಾವರಿ ಮತ್ತು ಚಿತ್ತೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಸ್ಥಾನಗಳಿಗೆ ವೈಎಸ್‌ಆರ್‌ಸಿಪಿ ಅವಿರೋಧವಾಗಿ ಚುನಾವಣೆ ಘೋಷಿಸಿದೆ. ಒಟ್ಟು 10,00,519 ಪದವೀಧರ ಮತದಾರರು, ಶಿಕ್ಷಕರ ಹುದ್ದೆಗಳಿಗೆ ನಡೆಯುವ ಚುನಾವಣೆಯಲ್ಲಿ 55,842 ಮತದಾರರು ಮತ್ತು ಸ್ಥಳೀಯ ಸಂಸ್ಥೆ ಕ್ಷೇತ್ರಗಳ ಚುನಾವಣೆಯಲ್ಲಿ 3,059 ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಪದವೀಧರ ಹಾಗೂ ಶಿಕ್ಷಕರ ಚುನಾವಣೆಯಲ್ಲಿ ನೇರಳೆ ಬಣ್ಣದ ಇಂಕ್ ಪೆನ್‌ನಿಂದ ಮತ ಪತ್ರದಲ್ಲಿರುವ ಸಂಖ್ಯೆಗಳನ್ನು ಗುರುತಿಸಿ ಮತದಾನದ ಹಕ್ಕನ್ನು ಚಲಾಯಿಸುವಂತೆ ಮತದಾರರಿಗೆ ಸೂಚಿಸಲಾಗಿದೆ. ಪದವೀಧರರ ಚುನಾವಣೆಗೆ 1,172 ಮತ್ತು ಶಿಕ್ಷಕರ ಚುನಾವಣೆಗೆ 351 ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 15 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.