ರಿಷಿಕೇಶ್ : ಮನೆಯೊಳಗೆ ಅಡಗಿ ಕುಳಿತಿದ್ದ ಚಿರತೆಯನ್ನು ಹಿಡಿಯುವ ವೇಳೆ ಅರಣ್ಯಾ ಅಧಿಕಾರಿಯೊಬ್ಬರಿಗೆ ದಾಳಿ ಮಾಡಿರುವ ಘಟನೆ ಉತ್ತರಾಖಂಡ್ನ ರಿಷಿಕೇಶ್ನಲ್ಲಿ ನಡೆದಿದೆ. ಇಲ್ಲಿನ ಮೀರಾ ನಗರದ ನಂದಕಿಶೋರ್ ಮನೆಗೆ ಚಿರತೆಯೊಂದು ಪ್ರವೇಶಿಸಿದೆ. ಚಿರತೆ ನೋಡಿದ ನಂದಕಿಶೋರ್ ಕುಟುಂಬ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.
ಸುದ್ದಿ ತಿಳಿದಾಕ್ಷಣ ಅರಣ್ಯ ಇಲಾಖೆ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ರೇಂಜರ್ ಅಧಿಕಾರಿಯೊಬ್ಬರು ಚಿರತೆ ಇರುವ ಜಾಗಕ್ಕೆ ತೆರಳಿದ್ದಾರೆ. ಆಗ ಚಿರತೆ ಅವರ ಮೇಲೆ ದಾಳಿ ಮಾಡಿ ಅಲ್ಲಿಂದ ನಗರದೊಳಗೆ ತೆರಳಿದೆ. ಕೂಡಲೇ ಅರಣ್ಯ ಸಿಬ್ಬಂದಿ ಚಿರತೆಯನ್ನು ಬೆನ್ನತ್ತಿ ತೆರಳಿದರು.
ಓದಿ: ಯಲಹಂಕ ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ ಅವರಣದಲ್ಲಿ ಚಿರತೆ ಪ್ರತ್ಯಕ್ಷ
ಅರಣ್ಯ ಅಧಿಕಾರಿ ಮೇಲೆ ಚಿರತೆ ದಾಳಿ ಅಲ್ಲಿಂದ ಕಾಡಿನೊಳಗೆ ತೆರಳಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಬೋನ್ ಇಟ್ಟಿದೆ. ಚಿರತೆ ನುಗ್ಗಿ ಅವಾಂತರ ಸೃಷ್ಟಿಯಾಗಿರುವುದರಿಂದ ಗ್ರಾಮದ ಜನ ಭಯಭೀತರಾಗಿದ್ದಾರೆ.