ಕೋಲ್ಕತಾ : ಲಾಕ್ಡೌನ್ ಹಿನ್ನೆಲೆ ಮನೆ ಬಾಗಿಲು ಹಾಕಿಕೊಂಡು ಮನೆಯಲ್ಲೇ ಉಳಿಯುವುದು ಮಕ್ಕಳ ಮನೋ ವಿಜ್ಞಾನದ ಮೇಲೆ ಆಳವಾದ ಪ್ರಭಾವ ಬೀರುತ್ತಿರುವ ಸಮಯದಲ್ಲಿ ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯ ಉದ್ಯಾನವನಗಳ ವಿಭಾಗದ ಅಡಿಯಲ್ಲಿರುವ 32 ಉದ್ಯಾನವನಗಳು ಅವರ ಮನಸ್ಸನ್ನು ಕೊಂಚ ತಾಜಾತನಗೊಳಿಸಲು ಪ್ರಯತ್ನಿಸುತ್ತಿವೆ.
ಈಗಾಗಲೇ ಮಾರಕ ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಅಭಯಾರಣ್ಯಗಳು, ಮೃಗಾಲಯ ಉದ್ಯಾನಗಳು ಮತ್ತು ಸಫಾರಿ ಉದ್ಯಾನವನಗಳನ್ನು ಮುಚ್ಚಲು ನಿರ್ಧರಿಸಿದೆ.
ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಸಹ ಎಲ್ಲಾ ಪಾರ್ಕ್ಗಳನ್ನು ಬಂದ್ ಮಾಡಲಾಗುತ್ತೆ ಎನ್ನಲಾಗಿತ್ತು.
ಆದರೆ, ಉತ್ತರ ಬಂಗಾಳದ ಪ್ರಮುಖ ಪಟ್ಟಣವಾದ ಸಿಲಿಗುರಿಯಲ್ಲಿ ಅರಣ್ಯ ಇಲಾಖೆಯ ಉದ್ಯಾನವನಗಳ ವಿಭಾಗದ ಅಡಿಯಲ್ಲಿರುವ 32 ಉದ್ಯಾನಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.
ಉದ್ಯಾನವನಗಳಲ್ಲಿನ ಜನಸಂದಣಿಯು ಕೊರೊನಾವೈರಸ್ ಪೂರ್ವದ ದಿನಗಳಿಗಿಂತ ಕಡಿಮೆ ಇದ್ದರೂ, ಕೆಲವು ಜನರು, ವಿಶೇಷವಾಗಿ ಮಕ್ಕಳು ಸ್ವಲ್ಪ ಉಲ್ಲಸಿತರಾಗಲು ಈ ಉದ್ಯಾನವನಗಳಿಗೆ ಭೇಟಿ ನೀಡುತ್ತಿದ್ದಾರೆ.
ಆದಾಗ್ಯೂ, ಈ ಉದ್ಯಾನವನಗಳಿಗೆ ಸಾರ್ವಜನಿಕ ಪ್ರವೇಶವನ್ನು ಅನುಮತಿಸುವಾಗ ಆರೋಗ್ಯ ನಿಯಮಾವಳಿಗಳ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಬಹಳ ಸ್ಟ್ರಿಕ್ಟ್ ಆಗಿದ್ದಾರೆ. ಪಾರ್ಕ್ ಪ್ರವೇಶಿಸುವವರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
ಒಂದು ವೇಳೆ ಮಾಸ್ಕ್ ಧರಿಸದೇ ಉದ್ಯಾನವನಗಳಲ್ಲಿ ತಿರುಗಾಡುತ್ತಿರುವವರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಇನ್ನು ಉದ್ಯಾನವನವನ್ನು ಆಗಾಗ ಸ್ವಚ್ಛಗೊಳಿಸಲಾಗುತ್ತದೆ.
ಈ 32 ಉದ್ಯಾನವನಗಳಲ್ಲೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಬಳಕೆಯಾಗುತ್ತಿದೆ. ಲಾಕ್ಡೌನ್ನಿಂದ ಡಲ್ ಆಗಿದ್ದ ಮಕ್ಕಳು ಕೂಡ ಪಾರ್ಕ್ಗೆ ಬಂದು ಆಡಿ ,ನಲಿದು ಎಂಜಾಯ್ ಮಾಡ್ತಿದ್ದಾರೆ.
ರಾಜ್ಯ ಅರಣ್ಯ ಇಲಾಖೆಯ ವಿಭಾಗೀಯ ಅರಣ್ಯ ಅಧಿಕಾರಿ (ಉತ್ತರ ಬಂಗಾಳ) ಅಂಜನ್ ಗುಹಾ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ಉದ್ಯಾನವನಗಳನ್ನು ಎಂದಿಗೂ ಬಂದ್ ಮಾಡಿಲ್ಲ. ಆದರೆ, ಕೊರೊನಾ ಹಿನ್ನೆಲೆ ಪಾರ್ಕ್ಗೆ ಬರುವವರ ಸಂಖ್ಯೆ ಸ್ವಲ್ಪ ಇಳಿಕೆಯಾಗಿದೆ ಎಂದು ಹೇಳಿದ್ರು.
ಮಾಸ್ಕ್ ಧರಿಸುವಿಕೆ ಸಾಮಾಜಿಕ ಅಂತರ, ಸ್ಯಾನಿಟೈಸೇಶನ್ ನಂತಹ ಕೊರೊನಾ ನಿಯಂತ್ರಣಾ ಕ್ರಮಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ಹೇಳಿದ್ರು.