ಮುಂಬೈ (ಮಹಾರಾಷ್ಟ್ರ) : ಫೆಬ್ರವರಿ 17 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 5.681 ಶತಕೋಟಿ ಯುಎಸ್ ಡಾಲರ್ಗಳಿಂದ 561.267 ಶತಕೋಟಿ ಡಾಲರ್‌ಗೆ ಇಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. ವಿದೇಶಿ ವಿನಿಮಯದಲ್ಲಿ ಒಟ್ಟಾರೆ ಇದು ಅವರ ಸತತ ಮೂರನೇ ವಾರದ ಕುಸಿತವಾಗಿದೆ. ಫೆಬ್ರವರಿ 3 ರಂದು ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 8.319 ಶತಕೋಟಿ ಡಾಲರ್ಗಳಿಂದ 566.948 ಶತಕೋಟಿ ಡಾಲರ್‌ಗೆ ಇಳಿದಿತ್ತು. ಆರ್‌ಬಿಐ ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿದೇಶಿ ವಿನಿಮಯ ಮೀಸಲುಗಳ ಅತಿದೊಡ್ಡ ಭಾಗವಾದ ಭಾರತದ ವಿದೇಶಿ ಕರೆನ್ಸಿ ಆಸ್ತಿಗಳು 4.515 ಶತಕೋಟಿ ಡಾಲರ್ ಕಡಿಮೆಯಾಗಿ ಒಟ್ಟಾರೆ 496.072 ಶತಕೋಟಿ ಡಾಲರ್ ಉಳಿದಿದೆ.
ದೇಶದ ಚಿನ್ನದ ಸಂಗ್ರಹವು 1.045 ಶತಕೋಟಿ ಯುಎಸ್ ಡಾಲರ್ಗಳಿಂದ 41.817 ಶತಕೋಟಿ ಯುಎಸ್ ಡಾಲರ್‌ಗೆ ಇಳಿದಿದೆ. ಕಳೆದ ವರ್ಷದ 2022 ರ ಆರಂಭದಲ್ಲಿ, ಒಟ್ಟಾರೆ ವಿದೇಶೀ ವಿನಿಮಯ ಮೀಸಲು ಸುಮಾರು 633 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಆರ್‌ಬಿಐನ ಇತ್ತೀಚಿನ ಮಧ್ಯಸ್ಥಿಕೆ ಮತ್ತು ಆಮದು ಮಾಡಿಕೊಂಡ ವಸ್ತುಗಳ ಬೆಲೆಯಲ್ಲಿನ ಏರಿಕೆಯಿಂದಾಗಿ ಹೆಚ್ಚಿನ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಆರ್‌ಬಿಐ ಮಧ್ಯಪ್ರವೇಶದ ಪರಿಣಾಮ: ಅಕ್ಟೋಬರ್ 2021 ರಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸುಮಾರು 645 ಶತಕೋಟಿ ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು ಎಂದು ವರದಿಯಾಗಿದೆ. ಹೆಚ್ಚುತ್ತಿರುವ ಯುಎಸ್ ಡಾಲರ್‌ಗೆ ವಿರುದ್ಧವಾಗಿ ಕುಸಿಯುತ್ತಿರುವ ರೂಪಾಯಿಯನ್ನು ರಕ್ಷಿಸಲು ಮಾರುಕಟ್ಟೆಯಲ್ಲಿ ಆರ್‌ಬಿಐ ಮಧ್ಯಸ್ಥಿಕೆಯಿಂದಾಗಿ ವಿದೇಶೀ ವಿನಿಮಯ ಮೀಸಲುಗಳು ಈಗ ತಿಂಗಳಿಂದ ಮಧ್ಯಂತರವಾಗಿ ಕುಸಿಯುತ್ತಿವೆ. ಆರ್‌ಬಿಐ ಕಾಲಕಾಲಕ್ಕೆ ಡಾಲರ್‌ಗಳ ಮಾರಾಟ ಸೇರಿದಂತೆ, ರೂಪಾಯಿಯಲ್ಲಿನ ತೀವ್ರ ಸವಕಳಿಯನ್ನು ತಡೆಯುವ ಉದ್ದೇಶದಿಂದ ಲಿಕ್ವಿಡಿಟಿ ನಿರ್ವಹಣೆಯ ಮೂಲಕ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತದೆ ಎಂಬುದು ಗಮನಾರ್ಹ. ಆರ್‌ಬಿಐ ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇದು ಮಾರುಕಟ್ಟೆ ಪರಿಸ್ಥಿತಿಗಳನ್ನು ನಿರ್ವಹಿಸಲು ಮಾತ್ರ ಮಧ್ಯಪ್ರವೇಶಿಸುತ್ತದೆ.
ವಿದೇಶಿ ವಿನಿಮಯ ಎಂದರೇನು?: ವಿದೇಶಿ ವಿನಿಮಯ ಮೀಸಲುಗಳು ಒಂದು ದೇಶದ ಕೇಂದ್ರ ಬ್ಯಾಂಕ್ ಹೊಂದಿರುವ ವಿದೇಶಿ ಆಸ್ತಿಗಳನ್ನು ಉಲ್ಲೇಖಿಸುತ್ತವೆ. ವಿದೇಶಿ ಸ್ವತ್ತುಗಳು ದೇಶದ ದೇಶೀಯ ಕರೆನ್ಸಿಯಲ್ಲಿ ಗುರುತಿಸದ ಸ್ವತ್ತುಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಬ್ಯಾಂಕ್ ಆಫ್ ಜಪಾನ್ ಹೊಂದಿರುವ ಯುಎಸ್ ಸರ್ಕಾರಿ ಬಾಂಡ್‌ಗಳು ಜಪಾನ್‌ಗೆ ವಿದೇಶಿ ಆಸ್ತಿಗಳಾಗಿವೆ. ಹೆಚ್ಚಿನ ದೇಶಗಳ ಕೇಂದ್ರೀಯ ಬ್ಯಾಂಕುಗಳು (ಅಥವಾ ಕೇಂದ್ರೀಯ ವಿತ್ತೀಯ ಅಧಿಕಾರಿಗಳು) ಹೆಚ್ಚಾಗಿ ವಿದೇಶಿ ಕರೆನ್ಸಿಯನ್ನೇ ವಿದೇಶಿ ವಿನಿಮಯ ಮೀಸಲು ರೂಪದಲ್ಲಿ ಹೊಂದಿರುತ್ತವೆ. ವಿದೇಶಿ ವಿನಿಮಯ ಮೀಸಲು ಯಾವುದೇ ಆದಾಯ ನೀಡುವುದಿಲ್ಲ. ವಿದೇಶಿ ಸರ್ಕಾರಿ ಬಾಂಡ್‌ಗಳು (ಸ್ಥಿರ ಆದಾಯ ಸಾಧನಗಳು) ಮಾತ್ರ ಬಡ್ಡಿ ಪಾವತಿಗಳ ರೂಪದಲ್ಲಿ ಆದಾಯ ತರುತ್ತವೆ.
ಅಮೆರಿಕದ ಡಾಲರ್ ವಾಸ್ತವಿಕ ಜಾಗತಿಕ ಕರೆನ್ಸಿಯಾಗಿದೆ ಮತ್ತು ಇದನ್ನು ಬಹುಪಾಲು ಅಂತರಾಷ್ಟ್ರೀಯ ವಹಿವಾಟುಗಳಿಗೆ ಬಳಸಲಾಗುತ್ತದೆ. ನಿರ್ದಿಷ್ಟ ವ್ಯಾಪಾರ ಅಥವಾ ವಹಿವಾಟು ನಡೆಸುವ ಎರಡು ದೇಶಗಳ ಪೈಕಿ ಅಮೆರಿಕ ಇರದಿದ್ದರೂ ಸಹ ಹೆಚ್ಚಿನ ಅಂತರರಾಷ್ಟ್ರೀಯ ವಹಿವಾಟುಗಳು ಯುಎಸ್ ಡಾಲರ್ ನಲ್ಲಿಯೇ ನಡೆಯುತ್ತವೆ.
ಇದನ್ನೂ ಓದಿ: 2030ಕ್ಕೆ ಭಾರತದ ಜಿಡಿಪಿ 7 ಟ್ರಿಲಿಯನ್ ಡಾಲರ್‌ಗೆ ಏರಿಕೆ ಕಾಣಬಹುದು: ದೇಶದ ಮುಖ್ಯ ಆರ್ಥಿಕ ಸಲಹೆಗಾರರ ಭವಿಷ್ಯ