ಮೀರತ್: ಲವರ್ ಜತೆ ಸೇರಿ ತನ್ನ ಕುಟುಂಬದ 7 ಮಂದಿಯ ಕೊಲೆ ಮಾಡಿರುವ ಶಬ್ನಮ್ಗೆ ಗಲ್ಲಿಗೇರಿಸಲು ತಯಾರಿ ನಡೆಸಿದ್ದು, ಡೆತ್ ವಾರೆಂಟ್ ಲಭ್ಯವಾಗುತ್ತಿದ್ದಂತೆ ಮಥುರಾದ ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗುವುದು.
ಓದಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್!? ಏನು ಆಕೆ ಎಸಗಿದ ಅಪರಾದ!?
2018ರ ಏಪ್ರಿಲ್ 14-15ರ ತಡರಾತ್ರಿ ಶಬ್ನಮ್ ತನ್ನ ಲವರ್ ಸಲೀಂ ಜತೆ ಸೇರಿ ಕುಟುಂಬದ ತಂದೆ, ತಾಯಿ, ಸಹೋದರಿ ಹಾಗೂ ಸಹೋದರರು ಸೇರಿದಂತೆ ಏಳು ಮಂದಿಯ ಬರ್ಬರ ಕೊಲೆ ಮಾಡಿದ್ದರು. ಇದಾದ ಬಳಿಕ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಇದೀಗ ಆಕೆಯನ್ನ ಗಲ್ಲಿಗೇರಿಸಲು ಎಲ್ಲ ರೀತಿಯ ತಯಾರಿ ನಡೆಸಲಾಗಿದ್ದು, ಗಲ್ಲಿಗೇರಿಸುವ ವ್ಯಕ್ತಿ ಪವನ್ ಜಲ್ಲಾಡ್ ಮಾಹಿತಿ ಹಂಚಿಕೊಂಡಿದ್ದಾರೆ.
ಮಥುರಾ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ತಮ್ಮೊಂದಿಗೆ ಸಂಪರ್ಕ ಸಾಧಿಸಿಲ್ಲ ಎಂದಿರುವ ಪವನ್, ಡೆತ್ ವಾರೆಂಟ್ ಜೈಲರ್ಗಳ ಕೈಗೆ ಸಿಗುತ್ತಿದ್ದಂತೆ ಅವರು ತಮ್ಮೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಾವು ಶಬ್ನಮ್ ಅವರನ್ನ ಗಲ್ಲಿಗೇರಿಸಲು ಹಿಂಜರಿಯವುದಿಲ್ಲ ಎಂದಿದ್ದು, ಇದು ತಮ್ಮ ಕರ್ತವ್ಯ ಎಂದಿದ್ದಾರೆ.
ಮಥುರಾಗೆ ತೆರಳಿದ ನಂತರ ಪವನ್ ಗಲ್ಲಿಗೇರಿಸುವ ಜಾಗದ ಪರಿಶೀಲನೆ ನಡೆಸಲಿದ್ದು, ಇದಾದ ಬಳಿಕ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ.