ETV Bharat / bharat

ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ - ಈಟಿವಿ ಭಾರತ ಕನ್ನಡ

ಮಂಜು ರೈಲು ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಿನ ಪರಿಸ್ಥಿತಿಗಳಲ್ಲಿ ವೇಗಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಪ್ರಯಾಣಿಕರಿಗೆ ಪ್ರಕಟಣೆಗಳು ಮತ್ತು ಇತರ ವಿಧಾನಗಳ ಮೂಲಕ ವೇಳಾಪಟ್ಟಿಗಳ ಬಗ್ಗೆ ತಿಳಿಸಲಾಗುತ್ತದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ
fog-grips-delhi-amid-dropped-mercury
author img

By

Published : Dec 19, 2022, 11:56 AM IST

ಹೊಸದಿಲ್ಲಿ: ಪ್ರಸಕ್ತ ಚಳಿಗಾಲ ಋತುವಿನ ಮೊದಲ ದಟ್ಟ ಮಂಜು ಸೋಮವಾರ ಬೆಳಗ್ಗೆ ದೆಹಲಿಯನ್ನು ಆವರಿಸಿದ್ದು, ರೈಲು ಸಂಚಾರ ವಿಳಂಬಗೊಂಡಿದೆ. ಅಲ್ಲದೆ ಟ್ರಾಫಿಕ್‌ಗೂ ತೊಂದರೆಯಾಗಿದೆ. ದಟ್ಟವಾದ ಮಂಜಿನಿಂದ ದೃಷ್ಟಿ ಗೋಚರತೆಯು 150 ಮೀಟರ್‌ಗೆ ತಗ್ಗಿದ್ದು, ರಸ್ತೆ ಮತ್ತು ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. ಸುಮಾರು 20 ರೈಲುಗಳು 15 ನಿಮಿಷದಿಂದ 2 ಗಂಟೆಗಳವರೆಗೆ ವಿಳಂಬವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಜು ರೈಲು ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಿನ ಪರಿಸ್ಥಿತಿಗಳಲ್ಲಿ ವೇಗಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಪ್ರಯಾಣಿಕರಿಗೆ ಪ್ರಕಟಣೆಗಳು ಮತ್ತು ಇತರ ವಿಧಾನಗಳ ಮೂಲಕ ವೇಳಾಪಟ್ಟಿಗಳ ಬಗ್ಗೆ ತಿಳಿಸಲಾಗುತ್ತದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಆದಾಗ್ಯೂ, ಮಧ್ಯರಾತ್ರಿಯಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಕಡಿಮೆ ಗೋಚರತೆಯ ಕಾರ್ಯವಿಧಾನಗಳು (ಎಲ್‌ವಿಪಿ) ಜಾರಿಯಲ್ಲಿದ್ದರೂ ವಿಮಾನ ಹಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂಜಾಬ್‌ನಿಂದ ಪೂರ್ವ ಉತ್ತರ ಪ್ರದೇಶದವರೆಗೆ, ಹರಿಯಾಣ ಮತ್ತು ದೆಹಲಿಯಾದ್ಯಂತ ಮಂಜಿನ ದಟ್ಟವಾದ ಪದರು ಆವರಿಸಿರುವುದು ಉಪಗ್ರಹ ಚಿತ್ರಗಳಿಂದ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಪಾಲಮ್ ವಿಮಾನ ನಿಲ್ದಾಣದಲ್ಲಿ ಮುಂಜಾನೆ 3.30 ರಿಂದ 6 ರ ನಡುವೆ ಗೋಚರತೆ 150-200 ಮೀಟರ್‌ಗೆ ಇಳಿದಿದೆ ಮತ್ತು ಬೆಳಗ್ಗೆ 7 ರ ಹೊತ್ತಿಗೆ 350 ಮೀಟರ್‌ಗೆ ಸುಧಾರಿಸಿದೆ. ಅಮೃತಸರ, ಪಟಿಯಾಲ, ಬರೇಲಿ, ಲಕ್ನೋ ಮತ್ತು ಬಹ್ರೈಚ್‌ನಲ್ಲಿ ಮುಂಜಾನೆ 25 ರಿಂದ 50 ಮೀಟರ್‌ಗಳಷ್ಟು ಗೋಚರತೆಯ ಮಟ್ಟವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮುಂದಿನ ಐದು ದಿನಗಳಲ್ಲಿ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಪತ್ನಿಗೆ ವಕೀಲ ಪತಿಯಿಂದ ಹಲ್ಲೆ: ಪೊಲೀಸರಿಗೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.