ನವದೆಹಲಿ: ಹವಾಮಾನ ವೈಪರೀತ್ಯದೊಂದಿಗೆ ಆರ್ಥಿಕ ಚೇತರಿಕೆ ಕಾರ್ಯತಂತ್ರಗಳನ್ನು ಹೊಂದಿಸಲು ಜಿ-20 ರಾಷ್ಟ್ರಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯಿಸಿದ್ದಾರೆ. ಇಟಾಲಿಯನ್ ಪ್ರೆಸಿಡೆನ್ಸಿ ಆಯೋಜಿಸಿರುವ ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತಡಿದರು. ಆರೋಗ್ಯ ವ್ಯವಸ್ಥೆ ಹಾಗೂ ಆರ್ಥಿಕತೆಯನ್ನು ಬಲಪಡಿಸಲು ಭಾರತ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಅಸಾಮಾನ್ಯ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯ ಅಗತ್ಯತೆಗಳು ವಾಣಿಜ್ಯ ಲಾಭಗಳನ್ನು ಮೀರಿಸುತ್ತವೆ. ಹಾಗಾಗಿ ಕೋವಿನ್ ವೇದಿಕೆಯನ್ನು ಇತರೆ ರಾಷ್ಟ್ರಗಳಿಗೆ ಉಚಿತವಾಗಿ ಹಂಚಲು ನಮ್ಮ ಸರ್ಕಾರ ನಿರ್ಧಿರಿಸಿದೆ ಎಂದರು.
ಜಿ 20 ಯ ಫ್ರೇಮ್ ವರ್ಕಿಂಗ್ ಗ್ರೂಪ್‌ನ ಸಹ-ಅಧ್ಯಕ್ಷರಾಗಿ, ಯುಕೆ ಜೊತೆಗೆ, ಡಿಜಿಟಲೀಕರಣವನ್ನು ಒಂದು ಕಾರ್ಯಸೂಚಿಯೆಂದು ಪರಿಗಣಿಸುತ್ತದೆ. ಇದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉತ್ತಮ ಆದಾಯಕ್ಕಾಗಿ ಹೆಚ್ಚಿನ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜುಲೈ 9-10 ರಂದು ನಡೆದ ಎರಡು ದಿನಗಳ ಚರ್ಚೆಯಲ್ಲಿ ಭಾಗವಹಿಸಿದ್ದ ನಿರ್ಮಲಾ ಸೀತಾರಾಮನ್, ಜಾಗತಿಕ ಆರ್ಥಿಕ ಅಪಾಯಗಳು ಮತ್ತು ಆರೋಗ್ಯ ಕುರಿತಾದ ಸವಾಲುಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು.