ಗುರುಗ್ರಾಮ/ಹರಿಯಾಣ: ಇಫ್ಕೊ ಚೌಕ್‌ನಲ್ಲಿ ಒಳಚರಂಡಿ ಲೈನ್ ಒಡೆದ ಕಾರಣ ಫ್ಲೈಓವರ್‌ನ ಒಂದು ಭಾಗ ಕುಸಿದಿದೆ. ಈ ಹಿನ್ನೆಲೆ ಫ್ಲೈಓವರ್ ಮೇಲೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಒಳಚರಂಡಿ ಪೈಪ್‌ಲೈನ್ ಒಡೆದ ಕಾರಣ, ಫ್ಲೈಓವರ್‌ನ ಭಾಗವು ಕುಸಿದು ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು - ನೋವುಗಳು ಉಂಟಾಗಿಲ್ಲ. ಘಟನೆ ನಂತರ ಫ್ಲೈಓವರ್ನಲ್ಲಿ ಅನೇಕ ದೊಡ್ಡ ಬಿರುಕುಗಳು ಕಾಣುತ್ತಿವೆ.
ಮುನ್ನೆಚ್ಚರಿಕೆಯಾಗಿ ಫ್ಲೈಓವರ್‌ನಿಂದ ವಾಹನಗಳ ಸಂಚಾರವನ್ನು ಸದ್ಯಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತವು ಒಳಚರಂಡಿ ಮಾರ್ಗ ದುರಸ್ತಿ ಮತ್ತು ಮೇಲ್ಸೇತುವೆಗಳ ದುರಸ್ತಿ ಕಾರ್ಯ ಆರಂಭಿಸಿದೆ.
ಗುರುಗ್ರಾಮದಲ್ಲಿ ಈ ರೀತಿ ಫ್ಲೈಓವರ್ ಭಾಗ ಕುಸಿತ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ದ್ವಾರಕಾ ಎಕ್ಸ್‌ಪ್ರೆಸ್ ವೇ ಸೋಹ್ನಾ ರಸ್ತೆಯ ಮೇಲ್ಸೇತುವೆಯ ಒಂದು ಭಾಗ ಕುಸಿದಿತ್ತು. ಕೆಲವು ದಿನಗಳ ಹಿಂದೆ ರಾಂಪುರ ಚೌಕ್‌ನಲ್ಲಿ ಕೂಡ ಫ್ಲೈಓವರ್‌ನ ಪ್ರಮುಖ ಭಾಗ ಕುಸಿತ ಕಂಡಿತ್ತು. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ:ಎಚ್ಚೆತ್ತ ಬಂಗಾಳ ಪೊಲೀಸ್.. ರಾಜ್ಯದಲ್ಲಿ ನೆಲೆಸಿರುವ ಆಫ್ಘನ್ ಪ್ರಜೆಗಳ ಮೇಲೆ ತೀವ್ರ ನಿಗಾ