ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ಮತ್ತು ಮಲ ವಿಸರ್ಜನೆ ಮಾಡಿದ್ದರೆ ಎಂಬ ಆರೋಪ ಕೇಳಿ ಬಂದಿದೆ. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಏರ್ ಇಂಡಿಯಾ ವಿಮಾನದಲ್ಲಿ ರಾಮ್ ಸಿಂಗ್ ಎಂಬ ಪ್ರಯಾಣಿಕ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆ ಮಾಡಿದ್ದಾನೆ.
ಅಷ್ಟೇ ಅಲ್ಲ ಆತನ ಪ್ರಯಾಣದ ಉದ್ದಕ್ಕೂ ಉಗುಳುತ್ತಿದ್ದನು ಎಂದು ಹೇಳಲಾಗುತ್ತಿದೆ. ಈ ಘಟನೆ ವಿಮಾನ ಸಂಖ್ಯೆ AIC866ದಲ್ಲಿ ನಡೆದಿದೆ. ಇನ್ನು ಆರೋಪಿ ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿದ್ದು, ಆತನ ಗಲಾಟೆ ಬಹಳ ಹೊತ್ತು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕ ಅಸಭ್ಯ ವರ್ತನೆ ಗಮನಸಿದ ಸಿಬ್ಬಂದಿ ತಕ್ಷಣವೇ ವಿಮಾನದ ಪೈಲಟ್ ಮತ್ತು ಏರ್ ಇಂಡಿಯಾದ ಭದ್ರತೆಗೆ ಮಾಹಿತಿ ನೀಡಿದರು. ದೆಹಲಿಗೆ ಬಂದಿಳಿದ ಕೂಡಲೇ ಪ್ರಯಾಣಿಕ ರಾಮ್ ಸಿಂಗ್ ಅವರನ್ನು ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಮಾನದ ಸಮಯದಲ್ಲಿ ಪ್ರಯಾಣಿಕರು ಆಸನ ಸಂಖ್ಯೆ 17F ನಲ್ಲಿ ಕುಳಿತಿದ್ದರು. ನೆಲದ ಮೇಲೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಹೇಳಿದ್ದೇನು..?: 24 ಜೂನ್ 2023 ರಂದು ಮುಂಬೈನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ AIC 866 ರಲ್ಲಿ ಪ್ರಯಾಣಿಕ ರಾಮ್ ಸಿಂಗ್ ಸೀಟ್ ಸಂಖ್ಯೆ 17F ನಲ್ಲಿ ಕುಳಿತಿದ್ದರು. ವಿಮಾನದಲ್ಲಿ ಮಲ, ಮೂತ್ರ ವಿಸರ್ಜನೆ, ಉಗುಳಿದರು. ಘಟನೆಗೆ ಕ್ಯಾಬಿನ್ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ ಮೌಖಿಕ ಎಚ್ಚರಿಕೆ ನೀಡಿದರು
ಇನ್ನು ಈ ಘಟನೆಯ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಅಮನ್ ವಾಟ್ಸ್ ಪೈಲಟ್ ಇನ್ ಕಮಾಂಡ್ ಕ್ಯಾಪ್ಟನ್ ವರುಣ್ ಸಂಸಾರೆ ಅವರಿಗೆ ಮಾಹಿತಿ ನೀಡಿದ್ದರು. ಅವರು ತಕ್ಷಣ ಏರ್ ಇಂಡಿಯಾಗೆ ಮಾಹಿತಿ ರವಾನಿಸಿದ್ದರು. ವಿಮಾನ ಲ್ಯಾಂಡ್ ಆದ ಕೂಡಲೇ ಪ್ರಯಾಣಿಕರನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ಘಟನೆಯ ಬಗ್ಗೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ವರುಣ್ ಸಂಸಾರೆ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 294/510 ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಓದಿ:ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!
ಅರ್ಧ ದಾರಿಯಲ್ಲೇ ಕೈ ಬಿಟ್ಟ ಏರ್ ಇಂಡಿಯಾ ಪೈಲಟ್: ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ದಿನಕ್ಕೊಂದು ವಿವಾದಕ್ಕೆ ಸಿಲುಕುತ್ತಲೇ ಇರುತ್ತದೆ. ಲಂಡನ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಎಐ ಫ್ಲೈಟ್ 112 ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಕ್ಲಿಯರೆನ್ಸ್ ಸಿಕ್ಕ ಬಳಿಕ ಪೈಲಟ್ ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ವಿಮಾನ ಹಾರಿಸಲು ನಿರಾಕರಿಸಿದ್ದಾರೆ. ಇದರಿಂದ ಪ್ರಯಾಣಿಕರು ಬಸ್, ಕ್ಯಾಬ್ಗಳ ಮೂಲಕ ತಮ್ಮ ಗಮ್ಯ ಸ್ಥಾನ ತಲುಪಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಗಮನಾರ್ಹ..