ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಂಜು ಆವರಿಸಿದೆ. ದೆಹಲಿಯಲ್ಲಿ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇದರಿಂದಾಗಿ ರಸ್ತೆ ಮಾರ್ಗವಾಗಿ ಸಂಚರಿಸುವುದೇ ದುಸ್ತರವಾಗಿದೆ. ಮತ್ತೊಂದೆಡೆ, ಪಾಲಂ ವಿಮಾನ ನಿಲ್ದಾಣದಲ್ಲಿ ತುಂಬಾ ಮಂಜು ಮತ್ತು ಹಿಮ ಕವಿದಿದ್ದರಿಂದ ಕೆಲವು ಮೀಟರ್ ದೂರದಲ್ಲಿರುವ ವಸ್ತುಗಳು ಸಹ ಗೋಚರಿಸುತ್ತಿರಲಿಲ್ಲ. ಇದರಿಂದಾಗಿ ವಿಮಾನ ಸೇವೆಗೆ ತೀವ್ರ ಅಡಚಣೆ ಉಂಟಾಗಿದೆ.
ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ, ಇಲ್ಲಿನ ರನ್‌ವೇಯಲ್ಲಿ ಗೋಚರತೆ ಮಟ್ಟ ಝೀರೋ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ತುರ್ತಾಗಿ ಟೇಕಾಫ್ ಆಗಬೇಕಾದ ವಿಮಾನಗಳ ಸಂದರ್ಭದಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ತಡವಾಗಿ ಓಡುತ್ತಿವೆ. ಈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಲವು ವಿಮಾನಗಳನ್ನು ಈಗಾಗಲೇ ಮಾರ್ಗ ಬದಲಿಸಲಾಗಿದೆ. ಸ್ಪೈಸ್ ಜೆಟ್ ಪ್ರಯಾಣಿಕರಿಗೆ ವಿಮಾನದ ಸ್ಥಿತಿಯನ್ನು ಆಗಾಗ್ಗೆ ಪರಿಶೀಲಿಸುವಂತೆ ಕೇಳಿಕೊಂಡಿದೆ. ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ.
ದೆಹಲಿ ಸುತ್ತಮುತ್ತಲಿನ ರಾಜ್ಯಗಳ ವಿವಿಧ ವಿಮಾನ ನಿಲ್ದಾಣಗಳಲ್ಲಿ ಗೋಚರತೆ ಝೀರೋ ಮಟ್ಟಕ್ಕೆ ಕುಸಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಮೃತಸರ, ಪ್ರಯಾಗರಾಜ್, ಜೈಸಲ್ಮೇರ್, ಆಗ್ರಾ ಮತ್ತು ಗ್ವಾಲಿಯರ್ ವಿಮಾನ ನಿಲ್ದಾಣಗಳಲ್ಲಿ ಈ ಪರಿಸ್ಥಿತಿ ಚಾಲ್ತಿಯಲ್ಲಿದೆ. ಗೋಚರತೆ ಸಫ್ದರ್‌ಗಂಜ್‌ನಲ್ಲಿ 200 ಮೀಟರ್ ಮತ್ತು ಶಿಲ್ಲಾಂಗ್ ವಿಮಾನ ನಿಲ್ದಾಣದಲ್ಲಿ 300 ಮೀಟರ್‌ಗೆ ಕುಸಿದಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೆಲವು ವಿಮಾನಗಳು ಕಡಿಮೆ ಗೋಚರತೆಯಿಂದಾಗಿ ಮಾರ್ಗವನ್ನು ಬದಲಾಯಿಸಲಾಗಿದೆ. ದಟ್ಟ ಮಂಜಿನಿಂದಾಗಿ ಸೋಮವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ಮತ್ತು ಮುಂಬೈ ವಿಮಾನಗಳು ಲ್ಯಾಂಡ್ ಆಗಬೇಕಿತ್ತು. ಆದರೆ ಎಟಿಸಿ ಅಧಿಕಾರಿಗಳು ಈ ವಿಮಾನಗಳಿಗೆ ಲ್ಯಾಂಡಿಂಗ್ ಮಾಡಲು ಅವಕಾಶ ನೀಡಲಿಲ್ಲ. ಇದರೊಂದಿಗೆ ಇನ್ನೂ ಮೂರು ವಿಮಾನಗಳನ್ನು ಗನ್ನವರಂಗೆ ಮಾರ್ಗ ಬದಲಾಯಿಸಲಾಯಿತು. ವಿಮಾನಗಳು ಗನ್ನವರಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದವು.
ದೆಹಲಿಯಲ್ಲಿ ಚಳಿ ಹೆಚ್ಚುತ್ತಿರುವ ಕಾರಣ ನಿರಾಶ್ರಿತರಿಗೆ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅರ್ಕೆಪುರಂ, ಮುನಿರ್ಕಾ, ಲೋಧಿ ರಸ್ತೆ, ರಿಂಗ್ ರಸ್ತೆ ಮತ್ತು ಏಮ್ಸ್‌ನಲ್ಲಿ ದಟ್ಟವಾದ ಮಂಜು ಕವಿದಿದೆ. ಮತ್ತು ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಕೇಂದ್ರೀಯ ಮಾಲಿನ್ಯ ಮಂಡಳಿಯ ಎಕ್ಯೂಐ ಸೂಚ್ಯಂಕವು 400 ಅಂಕಗಳಿಗೆ ಕುಸಿದಿದೆ.
ಓದಿ: ಮಂಜಿನ ಹೊದಿಕೆಯಾದ ಉತ್ತರ ಭಾರತ: ಕೊರೆಯುವ ಚಳಿಗೆ ಹೆಪ್ಪುಗಟ್ಟಿದ ದಾಲ್ ಸರೋವರ