ETV Bharat / bharat

ಬಾಂಬ್ ಆತಂಕ: ಮಾಸ್ಕೋ - ಗೋವಾ ಅಂತಾರಾಷ್ಟ್ರೀಯ ವಿಮಾನ ತುರ್ತು ಲ್ಯಾಂಡಿಂಗ್​

ಅಂತಾರಾಷ್ಟ್ರೀಯ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ​ಬೆದರಿಕೆ ಕರೆ ಹಿನ್ನೆಲೆಯಲ್ಲಿ ಗುಜರಾತ್​ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

International Flight From Maxico to goa Emergency landed at Jamnagar Airport due to bomb suspect
ಬಾಂಬ್ ಆತಂಕ: ಮಾಸ್ಕೋ-ಗೋವಾ ಅಂತಾರಾಷ್ಟ್ರೀಯ ವಿಮಾನ ತುರ್ತು ಲ್ಯಾಂಡಿಂಗ್​
author img

By

Published : Jan 9, 2023, 10:56 PM IST

Updated : Jan 9, 2023, 11:04 PM IST

ಜಾಮ್‌ನಗರ(ಗುಜರಾತ್​): ಬಾಂಬ್​ ಬೆದರಿಕೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುಜರಾತ್​ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿದ್ದು, ಜಾಮ್‌ನಗರ ವಿಮಾನ ನಿಲ್ದಾಣವನ್ನು ಎಲ್ಲ ದಿಕ್ಕುಗಳಿಂದಲೂ ಬಂದ್​ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.

ಅಂತಾರಾಷ್ಟ್ರೀಯ ವಿಮಾನವು ಮೆಕ್ಸಿಕೋದಿಂದ ಗೋವಾಕ್ಕೆ ತೆರಳುತ್ತಿತ್ತು. ಬಾಂಬ್ ಸ್ಫೋಟದ ಸಾಧ್ಯತೆಯ ಭೀತಿಯಿಂದ ವಿಮಾನವನ್ನು ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ಗೋವಾ ಎಟಿಸಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಮಾಸ್ಕೋ - ಗೋವಾ ಫ್ಲೈಟ್‌ನಲ್ಲಿದ್ದ ಎಲ್ಲಾ 244 ಪ್ರಯಾಣಿಕರನ್ನು ರಾತ್ರಿ 9.49ರ ಸುಮಾರಿಗೆ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಜಾಮ್‌ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದ ನಂತರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠರೂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಕ್ಷಮಿಸಿ ಮಮ್ಮಿ ನಾವು ನಮ್ಮ ಆಸೆಯಂತೆ ಆತ್ಮಹತ್ಯೆ ಮಾಡಿಕೊಂಡಿದ್ದೇವೆ: ಸಾಮೂಹಿಕ ಆತ್ಮಹತ್ಯೆ

ಬಿಹಾರದಲ್ಲಿ ಭೀಕರ ಅಪಘಾತ: ಬಿಹಾರದ ಕತಿಹಾರ ಜಿಲ್ಲೆಯಲ್ಲಿ ಆಟೋ ಮತ್ತು ಟ್ರಕ್​ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕತಿಹಾರ ಜಿಲ್ಲಾ ಕೇಂದ್ರದಿಂದ 8 ಕಿಮೀ ದೂರದಲ್ಲಿರುವ ಕೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ರಿ ಪೆಟ್ರೋಲ್ ಪಂಪ್ ಬಳಿ ದುರ್ಘಟನೆ ನಡೆದಿದೆ. ಆಟೋದಲ್ಲಿದ್ದವರೆಲ್ಲರೂ ಖೇರಿಯಾ ಪಂಚಾಯತ್‌ನ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಎಲ್ಲರೂ ರೈಲು ಹಿಡಿಯಲು ಖೇರಿಯಾದಿಂದ ಕತಿಹಾರ್ ಜಂಕ್ಷನ್‌ಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಆಟೋದಲ್ಲಿ ಒಟ್ಟು 8 ಮಂದಿ ಇದ್ದರು. ಅದರಲ್ಲಿ ಒಬ್ಬ ಮಹಿಳೆ ಬದುಕಿದ್ದಾರೆ. ರಾತ್ರಿ 8.20ರ ಸುಮಾರಿಗೆ ಘಟನೆ ನಡೆದಿದೆ. ಮೃತರಲ್ಲಿ ಧನಂಜಯ್ ಠಾಕೂರ್, ಅರುಣ್ ಠಾಕೂರ್, ಊರ್ಮಿಳಾ ದೇವಿ, ಮುಖರ್ಜಿ, ಲಾಲು, ಗೋಲು ಮತ್ತು ಆಟೋ ಚಾಲಕ ಪಪ್ಪು ಪಾಸ್ವಾನ್ ಸೇರಿದ್ದಾರೆ. ಈ ಘಟನೆಯ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಎಸ್​ಪಿ ಜಿತೇಂದ್ರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Jan 9, 2023, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.