ETV Bharat / bharat

ಎರಡೇ ತಿಂಗಳಲ್ಲಿ ಬುಡಕಟ್ಟು ಶಾಲೆಯ ಐವರು ವಿದ್ಯಾರ್ಥಿಗಳು ಸಾವು - ವಿದ್ಯಾರ್ಥಿಗಳ ಸಾವಿನ ಬಗ್ಗೆ ತನಿಖೆ

ಆಂಧ್ರ ಪ್ರದೇಶದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

five-students-died-in-last-two-months-in-ap-school
ಎರಡೇ ತಿಂಗಳಲ್ಲಿ ಬುಡಕಟ್ಟು ಶಾಲೆಯ ಐವರು ವಿದ್ಯಾರ್ಥಿಗಳ ಸಾವು: ಪೋಷಕರಿಗೆ ಆತಂಕ
author img

By

Published : Dec 28, 2022, 9:29 PM IST

Updated : Dec 28, 2022, 10:10 PM IST

ಅಲ್ಲೂರಿ ಸೀತಾಮರಾಜು (ಆಂಧ್ರ ಪ್ರದೇಶ): ಬುಡಕಟ್ಟು ಕಲ್ಯಾಣ ಆಶ್ರಮ ಶಾಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅಲ್ಲೂರಿ ಸೀತಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಈ ಘಟನಾವಳಿ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಇಲ್ಲಿನ ಪಾಡೇರು ತಳರಸಿಂಗಿ ಬಾಲಕರ ಆಶ್ರಮ ಶಾಲೆಯಲ್ಲಿ ಇಂದು ಎಂಟನೇ ತರಗತಿ ಓದುತ್ತಿದ್ದ ಧೋನಿ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದರಿಂದ ಆಘಾತಗೊಂಡ ಸಂಬಂಧಿಕರು ಹಾಗೂ ವಿದ್ಯಾರ್ಥಿ ಸಂಘದ ಮುಖಂಡರು ಪ್ರತಿಭಟನೆ ಸಹ ನಡೆಸಿದರು. ವಿದ್ಯಾರ್ಥಿಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಮತ್ತು ಶಾಲಾ ಅಧಿಕಾರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ಧೋನಿ ಬೆಳಗ್ಗೆ ಏಕಾಏಕಿ ತೀವ್ರ ಅಸ್ವಸ್ಥರಾಗಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆದರೆ, ಎರಡು ತಿಂಗಳಲ್ಲಿ ಇದೇ ಆಶ್ರಮ ಶಾಲೆಯಲ್ಲಿ ಇದೇ ರೀತಿ ಅಸ್ವಸ್ಥಗೊಂಡು ಇದುವರೆಗೆ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆದ್ದರಿಂದ ಈ ಸಾವುಗಳ ಬಗ್ಗೆ ವಿದ್ಯಾರ್ಥಿ ಸಂಘದ ಮುಖಂಡರು ಅನುಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಾಲಾ ಬಾಲಕಿಯೊಂದಿಗೆ ಓಡಿ ಹೋದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್!

Last Updated : Dec 28, 2022, 10:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.