ಗುಜರಾತ್: ಗಿರ್ ಕಾಡಿನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಹೊಡೆದುರುಳಿಸುವ, ಬಲೆಗೆ ಬೀಳಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅರಣ್ಯ ಇಲಾಖೆ 5 ಮಂದಿಯನ್ನು ಬಂಧಿಸಿದೆ.
ಜುನಾಗಢ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಕೆ. ಬೆರ್ವಾಲ್ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಈ ಕುರಿತು ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಂಗಾರ್ಪುರ್ ಗ್ರಾಮದ ಆರೋಪಿ, ಕೆಲವು ವರ್ಷಗಳ ಹಿಂದೆ ಬಲೆ ಬಳಸಿ ಸಿಂಹದ ಮರಿಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು.
ಮತ್ತೋರ್ವ ಅಧಿಕಾರಿಯ ಪ್ರಕಾರ, ಇತರೆ ನಾಲ್ಕು ಬೇಟೆಗಾರರನ್ನು ಈ ಪ್ರದೇಶದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಇನ್ನೂ ನಾವು ಈ ವಾರದಲ್ಲಿ ಹಲವಾರು ಶಂಕಿತ ಕಳ್ಳ ಬೇಟೆಗಾರರನ್ನು ಬಂಧಿಸಿದ್ದೇವೆಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಮಾಲೀಕನ ಶ್ವಾನ ಪ್ರೀತಿ.. ಐದು ಮಿಲಿಯನ್ ಯುಎಸ್ ಡಾಲರ್ ಒಡತಿಯಾದ ನಾಯಿ..
ಗಿರ್ನ ಪ್ರಾಚಿ ಗ್ರಾಮದ ಹೊರವಲಯದಲ್ಲಿ ಸಿಂಹದ ಮರಿ ಬಲೆಯಲ್ಲಿ ಸಿಕ್ಕಿಬಿದ್ದಿರುವುದು ಪತ್ತೆಯಾದ ನಂತರ ಕನಿಷ್ಠ 38 ಶಂಕಿತ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ.
ಆರೋಪಿಗಳು ನರಿ, ಮೊಲಗಳಂತಹ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂದು ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ. ಸಾಮಾನ್ಯವಾಗಿ ಔಷಧಗಳನ್ನು ತಯಾರಿಸಲು ಈ ಪ್ರಾಣಿಗಳ ದೇಹದ ಭಾಗ, ಕೆಲ ಅಂಶಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.