ETV Bharat / bharat

ಗೋವಾದಲ್ಲಿ ಮಮತಾಗೆ ಶಾಕ್​.. ಪಕ್ಷ ಸೇರಿದ್ದ ಕೆಲ ತಿಂಗಳಲ್ಲಿ TMC ತೊರೆದ ಐವರು ಮುಖಂಡರು - ಟಿಎಂಸಿ ತೊರೆದ ಐವರು ಮುಖಂಡರು

Goa Assembly Election: ಗೋವಾ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ತೃಣಮೂಲ ಕಾಂಗ್ರೆಸ್​ಗೆ ಇದೀಗ ದಿಢೀರ್ ಶಾಕ್​ ಎದುರಾಗಿದ್ದು, ಐವರು ಮುಖಂಡರು ಪಕ್ಷಕ್ಕೆ ಗುಡ್​​ಬೈ ಹೇಳಿದ್ದಾರೆ.

Goa Assembly Election
Goa Assembly Election
author img

By

Published : Dec 25, 2021, 5:29 PM IST

ಪಣಜಿ(ಗೋವಾ): ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಇರಾದೆ ಇಟ್ಟುಕೊಂಡಿರುವ ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷಕ್ಕೆ ಇದೀಗ ಬಹುದೊಡ್ಡ ಹಿನ್ನಡೆಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ತೃಣಮೂಲ ಕಾಂಗ್ರೆಸ್​ ಸೇರಿಕೊಂಡಿದ್ದ ಐವರು ಪಕ್ಷಕ್ಕೆ ಗುಡ್​​ಬೈ ಹೇಳಿದ್ದಾರೆ.

ಧರ್ಮದ ಆಧಾರದ ಮೇಲೆ ಗೋವಾ ವಿಭಜನೆ ಮಾಡಲು ಟಿಎಂಸಿ ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿರುವ ಐವರು ಮುಖಂಡರು ಪಕ್ಷದಿಂದ ಹೊರ ಬಂದಿದ್ದಾರೆ. ಇದೇ ವರ್ಷ ಆಲ್​ ಇಂಡಿಯಾ ತೃಣಮೂಲ ಕಾಂಗ್ರೆಸ್(AITC)​ ಸೇರಿಕೊಂಡಿದ್ದ ಕಿಶೋರ್ ಪವಾರ್​, ಕೊಮಲ್ ಪವಾರ್​, ಸುಜಯ್​ ಮಲಿಕ್​ ಸೇರಿದಂತೆ ಐವರು ಇದೀಗ ಟಿಎಂಸಿ ತೊರೆದಿದ್ದು, ಇದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಲಿದೆ.

ಇದನ್ನೂ ಓದಿರಿ: 10ನೇ ತರಗತಿ ವಿದ್ಯಾರ್ಥಿನಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಪಕ್ಷದಿಂದ ಹೊರ ಬರುತ್ತಿದ್ದಂತೆ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಮುಖಂಡರು, ಗೋವಾ ವಿಭಜನೆ ಮಾಡಲು ಪ್ರಯತ್ನಿಸುತ್ತಿರುವ ಪಕ್ಷದೊಂದಿಗೆ ನಾವು ಮುಂದುವರೆಯಲು ಇಚ್ಛಿಸುವುದಿಲ್ಲ. ಟಿಎಂಸಿ ಇಲ್ಲಿನ ಜಾತ್ಯತೀತ ಪರಂಪರೆ ಹಾಳು ಮಾಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ನಾವು ಇದರೊಂದಿಗೆ ಕೈ ಜೋಡಿಸುವುದಿಲ್ಲ ಎಂದಿದ್ದಾರೆ.

2022ರ ಫೆಬ್ರವರಿಯಲ್ಲಿ ಪಂಜಾಬ್​, ಉತ್ತರ ಪ್ರದೇಶ ಜೊತೆ ಗೋವಾದ 40 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಕಾಂಗ್ರೆಸ್​, ಬಿಜೆಪಿ, ಆಮ್ ಆದ್ಮಿ ಹಾಗೂ ತೃಣಮೂಲ ಕಾಂಗ್ರೆಸ್​ ಭರ್ಜರಿ ತಯಾರಿ ನಡೆಸಿವೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರವಾದಿ ಗೋಮಾಂತಕ್​​ ಪಕ್ಷದ ಮಾಜಿ ಶಾಸಕ ಲಾವೂ ಮಾಮ್ಲೆದಾರ್​, ರಾಮ್​ ಮಾಂಡ್ರೇಕರ್​, ಕಿಶೋರ್ ಪರ್ವಾರ್​, ಕೋಮಲ್​ ಪರ್ವಾರ್​​ ಹಾಗೂ ಸುಜಯ್​ ಮಲ್ಲಿಕ್​ ರಾಜೀನಾಮೆ ನೀಡಿದ್ದು, ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.