ಪುಣೆ(ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭೋರ್ ತಾಲೂಕಿನ ಭಟ್ಘರ್ ಆಣೆಕಟ್ಟಿನ ನೀರಿನಲ್ಲಿ ಮುಳುಗಿ ಐವರು ಬಾಲಕಿಯರು ದುರ್ಮರಣಕ್ಕೀಡಾಗಿದ್ದಾರೆ. ಈಗಾಗಲೇ ನಾಲ್ವರ ಮೃತದೇಹ ಹೊರತೆಗೆಯಲಾಗಿದ್ದು, ಮತ್ತೋರ್ವ ಬಾಲಕಿ ಮೃತದೇಹಕ್ಕೋಸ್ಕರ ಶೋಧಕಾರ್ಯ ಮುಂದುವರೆದಿದೆ. ಮೃತರನ್ನು ಖುಷ್ಬು (19), ಮನೀಶಾ (20), ಚಾಂದನಿ (21), ಪೂನಂ (22),ಮೋನಿಕಾ(20) ಎಂದು ಗುರುತಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚಸ್ಕಮಾನ್ ಆಣೆಕಟ್ಟಿನ ಹಿನ್ನಿರಿನಲ್ಲಿ ಈಜಲು ಹೋಗಿದ್ದ ವೇಳೆ ಕೃಷ್ಣಮೂರ್ತಿ ಫೌಂಢೇಶನ್ನ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅದರಲ್ಲಿ ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು ಎಂದು ತಿಳಿದು ಬಂದಿದೆ. ಇಂದು ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ಈಗಾಗಲೇ ಎಲ್ಲರ ಮೃತದೇಹ ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ರಾಜೇಂದ್ರ ಕಚ್ರೆ, ತಹಸೀಲ್ದಾರ್ ಸಚಿನ್ ಪಾಟೀಲ್ ಮತ್ತು ರಾಜಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಪಾಟೀಲ್ ಭೇಟಿ ನೀಡಿದ್ದಾರೆ.
-
Maharashtra | Five girls drowned in Bhatghar Dam in Bhor Taluka of Pune District. 4 bodies were recovered, and a search operation is underway, Police said
— ANI (@ANI) May 19, 2022 " class="align-text-top noRightClick twitterSection" data="
">Maharashtra | Five girls drowned in Bhatghar Dam in Bhor Taluka of Pune District. 4 bodies were recovered, and a search operation is underway, Police said
— ANI (@ANI) May 19, 2022Maharashtra | Five girls drowned in Bhatghar Dam in Bhor Taluka of Pune District. 4 bodies were recovered, and a search operation is underway, Police said
— ANI (@ANI) May 19, 2022