ಔರಂಗಾಬಾದ್, ಬಿಹಾರ: ಪನ್ಪುನ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ನಾಲ್ವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯರ ರಕ್ಷಣೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಜಿಲ್ಲೆಯ ಗೋಹ್ ಬ್ಲಾಕ್‌ನಲ್ಲಿ ಭಾನುವಾರ ಒಂದು ಗಂಟೆಯ ಸುಮಾರಿಗೆ ಉಫಾ ಪೊಲೀಸ್ ಠಾಣೆ ವ್ಯಾಪ್ತಿಯ ಹಮೀದ್‌ನಗರ ಗ್ರಾಮದ ಪನ್ಪುನ್ ನದಿಯ ಕುಸ್ಮಾರಾ ಘಾಟ್ ಬಳಿ ಸ್ನಾನಕ್ಕೆ ಹೋಗಿದ್ದ 4 ಹುಡುಗಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಕಿಯರನ್ನು ರಕ್ಷಿಸಲು ಹೋದ 45 ವರ್ಷದ ಶಂಕರ್ ಠಾಕೂರ್ ಕೂಡ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗಿ ನಾಲ್ವರು ಬಾಲಕಿಯರ ಸಾವು: ನೀರಿನಲ್ಲಿ ಮುಳುಗಿದ ಬಾಲಕಿಯರನ್ನು ಗುರುತಿಸಲಾಗಿದೆ. ಮೃತರು ವಿಜಯ್ ಭಗತ್ ಅವರ ಮಗಳು ಕಾಜಲ್ ಕುಮಾರಿ (15 ವರ್ಷ), ಹರಿದ್ವಾರ ಭಗತ್ ಅವರ ಮಗಳು ಛೋಟಿ ಕುಮಾರಿ (12 ವರ್ಷ), ಗನೌರಿ ಭಗತ್ ಅವರ ಪುತ್ರಿ ಮನಿಶಾ ಕುಮಾರಿ (16 ವರ್ಷ), ಬಖೋರಿ ವಿಶ್ವಕರ್ಮ ಅವರ ಪುತ್ರಿ ನಿಧಿ ಕುಮಾರಿ (14 ವರ್ಷ) ಎಂದು ಗುರುತಿಸಲಾಗಿದೆ. ಘಟನೆಯ ನಂತರ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ನೀರಿನಲ್ಲಿ ಮುಳುಗಿ ಐವರು ಸಾವು: ಅಪಘಾತದ ಮಾಹಿತಿ ತಿಳಿದ ತಕ್ಷಣ ಉಪಾಹ ಪೊಲೀಸ್ ಠಾಣೆಯ ಮುಖ್ಯಸ್ಥ ಮನೋಜ್ ಕುಮಾರ್ ತಿವಾರಿ ತಂಡ ಪಡೆಗಳೊಂದಿಗೆ ಆಗಮಿಸಿ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದರು. ಬಾಲಕಿಯರ ಮೃತದೇಹಗಳು ಪತ್ತೆಯಾಗಿವೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಓದಿ: ಕೊರಗಜ್ಜನ ಪವಾಡದಿಂದ ಬದುಕುಳಿದ ಕಂದಮ್ಮ.. ಅಜ್ಜನಿಗೆ ಚಿರಋಣಿ ಎಂದ ಪೋಷಕರು