ಯವತ್ಮಾಲ್ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಕಾರಣ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಆದರೆ ಮದ್ಯ ಸಿಗದೇ, ಸ್ಯಾನಿಟೈಸರ್ ಸೇವಿಸಿ ಏಳು ಜನ ಪ್ರಾಣ ಕಳೆದುಕೊಂಡಿರುವ ಘಟನೆ ಯವತ್ಮಾಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ನಡೆದಿದೆ.
ಮೃತರಲ್ಲಿ ಏಳು ಜನರ ಗುರುತು ಪತ್ತೆಯಾಗಿದ್ದು, ದತ್ತಾ ಲಂಜೆವಾರ್, ನೂತನ್ ಪಥರ್ತ್ಕರ್, ಗಣೇಶ್ ಶೇಲಾರ್, ಸಂತೋಷ್ ಮೆಹರ್, ಸುನಿಲ್ ಧಂಗೆ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.