ನವದೆಹಲಿ: ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಡಿಯಲ್ಲಿನ ಇಂಟಿಗ್ರೇಟೆಡ್ ಡೀಸಿಸ್ ಸರ್ವಿಲೆನ್ಸ್ ಪ್ರೋಗ್ರಾಂ (ಐಡಿಎಸ್ಪಿ) ವರದಿಯಂತೆ ಕಳೆದ 24 ಗಂಟೆಯಲ್ಲಿ ಐದು ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಜೆಎನ್. 1 ಹಾವಳಿ ಹೆಚ್ಚಿದ್ದು, ಜನವರಿ 2ರ ವರೆಗೆ 11 ರಾಜ್ಯದಲ್ಲಿ ಒಟ್ಟು 511 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ 602 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟಾರೆ ಕೋವಿಡ್ 19 ಪ್ರಕರಣಗಳು 4,50,15,136 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸದ್ಯ ಸಕ್ರಿಯವಾಗಿರುವ ಕೋವಿಡ್ ಪ್ರಕರಣಗಳು 4,440 ಆಗಿದೆ. ಕಳೆದ 24 ಗಂಟೆಗಳಲ್ಲಿ 722 ಮಂದಿ ಕೋವಿಡ್ನಿಂದ ಚೇತರಿಕೆ ಕಂಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಚೇತರಿಕೆ ಕಂಡ ಪ್ರಕರಣಗಳ ಸಂಖ್ಯೆ 4,44,77,272 ಆಗಿದೆ.
ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 2 ಸಾವು ಸಂಬಂಧಿಸಿವೆ. 66 ವರ್ಷದ ವೃದ್ಧ ಕೋವಿಡ್ ಮತ್ತು ದೀರ್ಘ ಯಕೃತ್ ಸಮಸ್ಯೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ. 79 ವರ್ಷದ ಮಹಿಳೆ ಕೋವಿಡ್ ಜೊತೆಗೆ ಸಿಎಡಿ ಮತ್ತು ಟಿ2ಡಿಎಂ ಮತ್ತು ಸೆಪ್ಸಿಸ್ ನಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲೂ ಕೂಡ ಕಳೆದ 24 ಗಂಟೆಗಳಲ್ಲಿ ಒಂದು ಕೋವಿಡ್ ಸಾವು ವರದಿಯಾಗಿದೆ. ವಿಜಯನಗರದ 45 ವರ್ಷದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಪಂಜಾಬ್ನಲ್ಲಿ ಒಂದು ಸಾವು ಸಂಭವಿಸಿದ್ದು, 62 ವರ್ಷದ ವ್ಯಕ್ತಿ ಅಸುನೀನಿಗದ್ದಾರೆ. ಇವರು ಕೂಡ ಶ್ವಾಸಕೋಶ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದರು.
ತಮಿಳುನಾಡಿನಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, 74 ವರ್ಷ ವಯಸ್ಸಿನ ಇವರು ಕೋವಿಡ್ ಮತ್ತು ಶ್ವಾಸಕೋಶ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ರಾಜ್ಯವಾರು ಜೆಎನ್.1 ಪ್ರಕರಣದಲ್ಲಿ ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4 ಮತ್ತು ತೆಲಂಗಾಣ 2, ಹರಿಯಾಣ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಮಾತ್ರವಲ್ಲದೇ, ಜಾಗತಿಕವಾಗಿ ಕೋವಿಡ್ ಸೋಂಕಿನ ಏರಿಕೆ ಕಂಡು ಬಂದಿವೆ ಎಂದು ಹಲವು ವರದಿಗಳು ತಿಳಿಸಿದೆ.. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಳೆದೊಂದು ತಿಂಗಳಿನಿಂದ ಜಾಗತಿಕವಾಗಿ ಕೋವಿಡ್ 19 ಪ್ರಕರಣದಲ್ಲಿ ಶೇ 52ರಷ್ಟು ಹೆಚ್ಚಾಗಿದೆ. ಇದರಿಂದ ಆಸ್ಪತ್ರೆಗಳಲ್ಲಿ ಮತ್ತು ಐಸಿಯುಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನಿಂದ ಜಾಗತಿಕ ಸಾವಿನ ಸಂಖ್ಯೆ ಏರಿಕೆ ಕಂಡಿದೆ. (ಎಎನ್ಐ)
ಇದನ್ನೂ ಓದಿ: ಆತಂಕ, ನಿದ್ರೆಯಲ್ಲಿ ತೊಡಕು: ಜೆಎನ್ 1 ಸೋಂಕಿನ ಹೊಸ ಲಕ್ಷಣಗಳು