ETV Bharat / bharat

ಚುನಾವಣಾ ಕಣದಿಂದ ಹಿಂದೆ ಸರಿದ ಕೇರಳದ ಮೊದಲ ತೃತೀಯ ಲಿಂಗಿ - ಸಿಪಿಎಂ ಅಭ್ಯರ್ಥಿ ಪಿ. ಜಿಜಿ

ಕೇರಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ತೃತೀಯ ಲಿಂಗಿ ಅನನ್ಯ ಕುಮಾರ್ ಅಲೆಕ್ಸ್, ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

First transgender candidate
ಅನನ್ನ್ಯ ಕುಮಾರ್ ಅಲೆಕ್ಸ್
author img

By

Published : Apr 4, 2021, 8:51 AM IST

ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೊದಲ ತೃತೀಯ ಲಿಂಗಿ ಅನನ್ಯ ಕುಮಾರಿ ಅಲೆಕ್ಸ್ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ. ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿ ಪಕ್ಷದಲ್ಲಿ ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳವನ್ನು ತಾನು ಎದುರಿಸಿದ್ದಾಗಿ ಅವರು ಆರೋಪಿಸಿದ್ದಾರೆ.

ಅನನ್ಯ ಕುಮಾರಿ ಅವರನ್ನು ಮಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಡಿಎಸ್‌ಜೆಪಿ ಆಯ್ಕೆ ಮಾಡಿತ್ತು. ಯುಡಿಎಫ್ ಒಕ್ಕೂಟದ ಪ್ರತಿನಿಧಿ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಕೆ. ಕುನ್ಹಾಲಿಕುಟ್ಟಿ ಮತ್ತು ಎಲ್‌ಡಿಎಫ್ ಪ್ರತಿನಿಧಿಯಾಗಿರುವ ಸಿಪಿಎಂ ಅಭ್ಯರ್ಥಿ ಪಿ. ಜಿಜಿ ವಿರುದ್ಧ ಅವರು ಸ್ಪರ್ಧಿಸಿದ್ದರು.

'ಡಿಎಸ್‌ಜೆಪಿ ನಾಯಕರು ನನ್ನನ್ನು ಬಳಸಿಕೊಂಡಿದ್ದಾರೆ. ನನ್ನನ್ನು ಮುಂದಿರಿಸಿಕೊಳ್ಳುವುದರ ಹಿಂದೆ ಬೇರೆಯೇ ಯೋಜನೆ ಮತ್ತು ಕಾರಣಗಳಿದ್ದವು. ಆದರೆ ನನಗೆ ಆರಂಭದಲ್ಲಿ ಅದು ಅರ್ಥವಾಗಿರಲಿಲ್ಲ. ಕೇರಳದಲ್ಲಿನ ತೃತೀಯಲಿಂಗಿ ಜನರನ್ನು ಪ್ರತಿನಿಧಿಸಲು ಮತ್ತು ಅವರಿಗೆ ಸಮಾನತೆ ಕಲ್ಪಿಸುವ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೆ. ಆದರೆ ವೆಂಗಾರಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷವು ಸೂಚನೆ ನೀಡಿತ್ತು. ಅದು ಕೂಡ ನನ್ನ ನಿರ್ಧಾರವಾಗಿರಲಿಲ್ಲ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಯುಷ್‌ ಇಲಾಖೆ ಅಧಿಕಾರಿಗಳ ನಿಂದನೆ ಆರೋಪ: ನೊಂದ ಸಿಬ್ಬಂದಿಯಿಂದ ದಯಾಮರಣಕ್ಕೆ ಅರ್ಜಿ

ಮಲಪ್ಪುರಂ ಜಿಲ್ಲೆಯ ವೆಂಗರಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಯಲ್ಲಿದ್ದ ಅಲೆಕ್ಸ್, ಡಿಎಸ್‌ಜೆಪಿ ಪಕ್ಷದ ನಾಯಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ಹೇಳಿದರು. "ನಾನು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿಯಿಂದ ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದೇನೆ. ಹೆಚ್ಚಿನ ಪ್ರಚಾರ ಪಡೆಯಬೇಕಾದರೆ ನನ್ನೊಂದಿಗೆ ಆಟವಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಮುಂದೆ ಇಡಲು ಅವರಿಗೆ ಕೆಲವು ಯೋಜನೆಗಳು ಮತ್ತು ಕಾರಣಗಳಿವೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು .

ಕುನ್ಹಾಲಿಕುಟ್ಟಿ ಮತ್ತು ಎಲ್‌ಡಿಎಫ್​​ ಸರ್ಕಾರದ ವಿರುದ್ಧ ಕೀಳುಮಟ್ಟದಲ್ಲಿ ಟೀಕೆಗಳನ್ನು ಮಾಡುವಂತೆ ಡಿಎಸ್‌ಪಿಜೆ ನಾಯಕರು ನನ್ನ ಮೇಲೆ ಒತ್ತಡ ಹೇರಿದ್ದರು. ಚುನಾವಣೆ ಪ್ರಚಾರದ ವೇಳೆ ಪರ್ದಾ ಪದ್ಧತಿ ಅನುಸರಿಸುವಂತೆಯೂ ಒತ್ತಡ ಹೇರಿದ್ದರು. ನಾನು ನನ್ನ ವ್ಯಕ್ತಿತ್ವವನ್ನು ಬಿಟ್ಟುಕೊಡುವುದಿಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳಿದ ಬಳಿಕ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದರು' ಎಂದು ಅವರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.