ETV Bharat / bharat

70 ವರ್ಷಗಳ ಹಳೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಪ್ರವೇಶ

Shri Vishwanath Sanskrit Mahavidyalaya: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ 70 ವರ್ಷಗಳ ಹಳೆಯ ಶ್ರೀ ವಿಶ್ವನಾಥ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಪ್ರವೇಶ ಪಡೆದಿದ್ದಾರೆ.

author img

By ETV Bharat Karnataka Team

Published : Oct 4, 2023, 2:23 PM IST

first-time-sc-student-took-admission-in-70-year-old-shri-vishwanath-sanskrit-college-in-uttarkashi
70 ವರ್ಷಗಳ ಹಳೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಪ್ರವೇಶ

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಶ್ರೀ ವಿಶ್ವನಾಥ ಸಂಸ್ಕೃತ ಮಹಾವಿದ್ಯಾಲಯದಲ್ಲಿ 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಪ್ರವೇಶ ನೀಡಲಾಗಿದೆ. ಮತ್ತೊಂದೆಡೆ, ಎರಡು ದಶಕಗಳ ನಂತರ ವಿದ್ಯಾರ್ಥಿನಿಯರು ಸಹ ಮಹಾವಿದ್ಯಾಲಯಕ್ಕೆ ಮರಳಿದ್ದಾರೆ.

ಉತ್ತರಕಾಶಿ ಪ್ರತ್ಯೇಕ ಜಿಲ್ಲೆ ರಚನೆಯಾಗುವ ಮೊದಲು ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗಾಗಿ 1953ರಲ್ಲಿ ಶ್ರೀ ವಿಶ್ವನಾಥ ಸಂಸ್ಕೃತ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. ದಿವಂಗತ ಬ್ರಹ್ಮಸ್ವರೂಪಾನಂದ ಅವರು ಆಗ ಕಾಲದಲ್ಲಿ 5ರಿಂದ 8 ವಿದ್ಯಾರ್ಥಿಗಳೊಂದಿಗೆ ಈ ಮಹಾವಿದ್ಯಾಲಯವನ್ನು ಸ್ಥಾಪಿಸಿದ್ದರು. ಇಲ್ಲಿಯವರೆಗೆ ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳು ಮಾತ್ರ ಇಲ್ಲಿ ಸಂಸ್ಕೃತ ಶಿಕ್ಷಣ ಪಡೆಯುತ್ತಿದ್ದರು. ಈ ವರ್ಷ ಪ್ರಥಮ ಬಾರಿಗೆ ಶಾಸ್ತ್ರಿ ಪ್ರಥಮ ವರ್ಷದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಕಾಲೇಜು ಆಡಳಿತ ಪ್ರವೇಶ ನೀಡಿದೆ.

ಇಂದು ಈ ಮಹಾವಿದ್ಯಾಲಯದಲ್ಲಿ 6ನೇ ತರಗತಿಯಿಂದ ಹಿಡಿದು ಉತ್ತರ ಮಾಧ್ಯಮಿಕ ಮತ್ತು ಶಾಸ್ತ್ರಿ ಹಾಗೂ ಆಚಾರ್ಯ ತರಗತಿಗಳಲ್ಲಿ ನಡೆಯುತ್ತಿವೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಎಂದಿಗೂ ನಿರುದ್ಯೋಗಿಗಳಾಗಿ ಉಳಿಯುವುದಿಲ್ಲ. ಯಾಕೆಂದರೆ, ಇಲ್ಲಿ ವಿದ್ಯಾಭ್ಯಾಸ ಪೂರೈಸಿದವರಿಗೆ ಹಲವಾರು ಅವಕಾಶಗಳು ಸೃಷ್ಟಿಯಾಗುತ್ತವೆ. ಇಲ್ಲಿನ ಶಿಕ್ಷಣ ಪಡೆದ ಅನೇಕರು ಜ್ಯೋತಿಷ್ಯ, ಸಂಸ್ಕಾರ, ಕಥೆಗಾರರು ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಈಗ ಯಾವುದೇ ಜಾತಿ ಮತ್ತು ಧರ್ಮದ ವಿದ್ಯಾರ್ಥಿಗಳು ಸಂಸ್ಕೃತ ಶಿಕ್ಷಣವನ್ನು ಪಡೆಯಬಹುದು.

ಎರಡು ದಶಕಗಳ ನಂತರ ವಿದ್ಯಾರ್ಥಿನಿಯರ ಪ್ರವೇಶ: ಇದೇ ವೇಳೆ, ಎರಡು ದಶಕಗಳ ನಂತರ ವಿದ್ಯಾರ್ಥಿನಿಯರೂ ಕೂಡ ಶ್ರೀ ವಿಶ್ವನಾಥ ಸಂಸ್ಕೃತ ಮಹಾವಿದ್ಯಾಲಯಕ್ಕೆ ಮರಳಿದ್ದಾರೆ. ಪ್ರಥಮ ವರ್ಷದ ಶಾಸ್ತ್ರಿಯಲ್ಲಿ ಮೂವರು ಮತ್ತು ದ್ವಿತೀಯ ವರ್ಷದಲ್ಲಿ ಇಬ್ಬರು ಸೇರಿದಂತೆ ಒಟ್ಟು ಏಳು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಈ ಹಿಂದೆ ಇಸ್ಲಾಂ ಧರ್ಮವನ್ನು ಅನುಸರಿಸುವ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಈ ಮಹಾವಿದ್ಯಾಲಯದಲ್ಲಿ ಓದಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಗೆ ವಿದ್ಯಾರ್ಥಿನಿಯರು ಪ್ರವೇಶ ಪಡೆದಿರಲಿಲ್ಲ.

ಸಂಸ್ಕೃತ ಬಾರದ ವಿದ್ಯಾರ್ಥಿಗಳಿಗೂ ಪ್ರವೇಶ: ಮಹಾವಿದ್ಯಾಲಯ ಪದವಿ ವಿಭಾಗದ ಪ್ರಾಂಶುಪಾಲ ಡಾ.ದ್ವಾರಿಕಾ ಪ್ರಸಾದ್ ನೌಟಿಯಾಲ್ ಮಾತನಾಡಿ, ಈ ಹಿಂದೆಯೂ ಮಹಾವಿದ್ಯಾಲಯ ಪ್ರವೇಶಕ್ಕೆ ಜಾತಿ, ಧರ್ಮದ ನಿರ್ಬಂಧ ಇರಲಿಲ್ಲ. ಮಾಹಿತಿ ಕೊರತೆಯಿಂದ ಬೇರೆ ಜಾತಿ, ಧರ್ಮದ ಕೆಲವೇ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ ಜುಲೈ ತಿಂಗಳಲ್ಲಿ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬರು ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗೆ ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ ಇದೆ. ಇಲ್ಲಿ ಯಾವುದೇ ತಾರತಮ್ಯ ಇಲ್ಲದೇ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, 12ನೇ ತರಗತಿಯಲ್ಲಿ ಸಂಸ್ಕೃತ ಬಾರದ ವಿದ್ಯಾರ್ಥಿಗಳು ಸಹ ಪ್ರವೇಶ ಪಡೆಯಬಹುದು. ಆದರೆ, ಇದಕ್ಕಾಗಿ ಅವರು ಆರು ತಿಂಗಳೊಳಗೆ ಸಂಸ್ಕೃತ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಮಾಹಿತಿ ನೀಡಿದರು.

ವ್ಯವಸ್ಥಾಪಕ ಡಾ.ರಾಧೇಶ್ಯಾಮ್ ಖಂಡೂರಿ ಪ್ರತಿಕ್ರಿಯಿಸಿ, ಕೆಲ ವರ್ಷಗಳ ಹಿಂದೆ ಈ ಮಹಾವಿದ್ಯಾಲಯದಲ್ಲಿ ಹೆಣ್ಣು ಮಕ್ಕಳು ಓದುತ್ತಿದ್ದರು. ಆದರೆ, ಇದರ ನಡುವೆ ಪ್ರಚಾರದ ಕೊರತೆಯಿಂದ ವಿದ್ಯಾರ್ಥಿನಿಯರು ಇಲ್ಲಿ ಓದಲು ಬರುತ್ತಿರಲಿಲ್ಲ. ಈ ವರ್ಷ ಏಳರಿಂದ ಎಂಟು ವಿದ್ಯಾರ್ಥಿನಿಯರು ಶಾಸ್ತ್ರಿ ಮತ್ತು ಆಚಾರ್ಯ ವಿಭಾಗದಲ್ಲಿ ಓದುತ್ತಿದ್ದಾರೆ ಎಂದು ಹೇಳಿದರು.

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್, ಶ್ರೀನಗರದ ಗಡ್ವಾಲ್ ವಿಶ್ವವಿದ್ಯಾಲಯದ ಡೀನ್, ಪ್ರಾಧ್ಯಾಪಕ ದ್ವಾರಿಕಾ ಪ್ರಸಾದ್ ತ್ರಿಪಾಠಿ, ಪ್ರಸಿದ್ಧ ವ್ಯಾಸ್ ಗೋಪಾಲ್ ಮಣಿ, ಗರ್ವಾಲ್ ರೈಫಲ್‌ನ ಕ್ಯಾಪ್ಟನ್ ರಾಜೇಂದ್ರ ಶರ್ಮಾ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಇದೇ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಬುಡಕಟ್ಟು ಪ್ರದೇಶದ ಮೊದಲ ನ್ಯಾಯಾಧೀಶೆ ಹರಿಕಾ.. ಸಾಮಾನ್ಯ ಟೈಲರ್ ಮಗಳ ಸ್ಪೂರ್ತಿದಾಯಕ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.