ETV Bharat / bharat

ಕಳಪೆ ಆಹಾರ ಪೂರೈಕೆ ವಿಚಾರ: ಕಾನ್ಸ್​ಟೇಬಲ್ ಪ್ರತಿಭಟನೆ ವಿಡಿಯೋ ವೈರಲ್​, ತನಿಖೆಗೆ ಆದೇಶಿಸಿದ ಇಲಾಖೆ​​ - ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಪೊಲೀಸ್​ ಪೇದೆ ಮನೋಜ್​ ಕುಮಾರ್​ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಆಹಾರದ ಗುಣಮಟ್ಟದ ಬಗ್ಗೆ ಅನಗತ್ಯವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ

firozabad-constable
ಕಳಪೆ ಆಹಾರ ಪೂರೈಕೆ ವಿಚಾರ
author img

By

Published : Aug 11, 2022, 9:46 AM IST

ಫಿರೋಜಾಬಾದ್ (ಉತ್ತರ ಪ್ರದೇಶ): ಪೊಲೀಸ್ ಪೇದೆಯೊಬ್ಬರು ತಮಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?: ಪ್ರತಿಭಟನೆ ನಡೆಸುತ್ತಿದ್ದಾಗ ಅಳುತ್ತಿದ್ದ ಮನೋಜ್‌ಕುಮಾರ್ ಎಂಬ ಕಾನ್ಸ್​​ಟೇಬಲ್​​​​​​​​​​​​ ಅವರನ್ನು ಇತರ ಪೊಲೀಸ್​ ಸಿಬ್ಬಂದಿ ಹೊರಹಾಕಿದ್ದರು. ಇಲಾಖೆ ಕೊಡುತ್ತಿರುವ ಆಹಾರವು ಪ್ರಾಣಿ ಕೂಡ ತಿನ್ನಲು ಸಾಧ್ಯವಿಲ್ಲ, ಆದರೆ, ಅದನ್ನು ನಮಗೆ ನೀಡಲಾಗುತ್ತಿದೆ. ಇದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿಸಿಪಿಗಳ ಮಾಡುತ್ತಿರುವ ಹಗರಣವಾಗಿದೆ ಎಂದು ವಿಡಿಯೋದಲ್ಲಿ ಪೇದೆ ಆರೋಪಿಸಿದ್ದಾರೆ ಎನ್ನಲಾಗಿದೆ.

firozabad-constable
ಕಳಪೆ ಆಹಾರ ಪೂರೈಕೆ ವಿಚಾರ

ಅಷ್ಟೇ ಅಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ ಹೊರತಾಗಿಯೂ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸಲಾಗಿದೆ ಎಂದು ಪೊಲೀಸ್​ ಕಾನ್ಸ್​ಟೇಬಲ್​ ಆರೋಪಿಸಿದ್ದಾರೆ.

ಕಾನ್ಸ್​ಟೇಬಲ್​ ಆರೋಪ ತಳ್ಳಿ ಹಾಕಿದ ಹಿರಿಯ ಅಧಿಕಾರಿಗಳು: ಆದರೆ, ಪೊಲೀಸ್​ ಪೇದೆ ಮನೋಜ್​ ಕುಮಾರ್​ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಆಹಾರದ ಗುಣಮಟ್ಟದ ಬಗ್ಗೆ ಅನಗತ್ಯವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ವಿಡಿಯೋ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

firozabad-constable
ಕಾನ್ಸ್​ಟೇಬಲ್ ಪ್ರತಿಭಟನೆ ವಿಡಿಯೋ ವೈರಲ್​

ಕಠಿಣ ಕ್ರಮಕ್ಕೆ ಮುಂದಾಯಿತಾ ಇಲಾಖೆ?: ಆಹಾರ ಗುಣಮಟ್ಟವನ್ನು ಪ್ರಶ್ನಿಸಿದ ಪೊಲೀಸ್ ಕಾನ್ಸ್​ಟೇಬಲ್​ ಮನೋಜ್ ಕುಮಾರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್​ ಇಲಾಖೆ ಸಿದ್ಧತೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಪೊಲೀಸ್‌ ಇಲಾಖೆ ಸಾಮಾಜಿಕ ಮಾಧ್ಯಮ ವಿಭಾಗ, ಆರೋಪಿತ ಕಾನ್ಸ್‌ಟೇಬಲ್ ಅವರನ್ನು ಜಗಳಗಂಟ ಎಂದು ವಿವರಿಸುವ ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ಈ ಕಾನ್ಸ್​ಟೇಬಲ್​ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಹೇಳಿಕೊಂಡಿದೆ. ಕಾನ್ಸ್​ಟೇಬಲ್​ ನಡವಳಿಕೆಯ ತನಿಖೆಯನ್ನು ಸಿಒ ಲೈನ್‌ಗೆ ಮತ್ತು ಆಹಾರ ಪ್ರಕರಣದ ಗುಣಮಟ್ಟದ ತನಿಖೆಯನ್ನು ಸಿಒ ಸಿಟಿಗೆ ಹಸ್ತಾಂತರಿಸಲಾಗಿದೆ.

ಉತ್ತಮ ಆಹಾರ ನೀಡುವ ಬದಲು ಕ್ರಮ ಎಂದು ಆಕ್ರೋಶ: ಈ ನಡುವೆ ಅಧಿಕಾರಿಗಳ ವಿರುದ್ಧ ಕಾನ್ಸ್​ಟೇಬಲ್​ ಗರಂ ಆಗಿದ್ದಾರೆ. ಕಳಪೆ ಆಹಾರದ ಬಗ್ಗೆ ದೂರು ನೀಡಿದ್ದರೂ ಉತ್ತಮ ಆಹಾರ ನೀಡುವ ಬದಲು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾನ್ಸ್‌ಟೇಬಲ್‌ನ ಪ್ರತಿಭಟನೆಯಿಂದ ಪೊಲೀಸ್​ ಇಲಾಖೆ ಮುಖಭಂಗಕ್ಕೊಳಗಾಗಿದೆ. ಕಾನ್ಸ್​​ಟೇಬಲ್​ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನು ಓದಿ:ಸೇನಾ ಶಿಬಿರದ ಮೇಲೆ ದಾಳಿ: ಇಬ್ಬರು ಉಗ್ರರು ಖತಂ, ಮೂವರು ಯೋಧರು ಹುತಾತ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.