ETV Bharat / bharat

ಲಕ್ಷ್ಮೀ ಮೂರ್ತಿ ನಿಮಜ್ಜನ ವೇಳೆ ಗುಂಡಿನ ದಾಳಿ, ಕಲ್ಲು ತೂರಾಟ: ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಗಾಯ

ಲಕ್ಷ್ಮೀ ದೇವಿ ವಿಗ್ರಹ ನಿಮಜ್ಜನ ಸಂಭ್ರಮದಲ್ಲಿದ್ದ ಕೆಲವರು ಪೊಲೀಸರ ಸೂಚನೆಯಿಂದ ರೊಚ್ಚಿಗೆದ್ದು ಗುಂಡಿನ ದಾಳಿ ಮತ್ತು ಕಲ್ಲು ತೂರಾಟ ಮಾಡಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ)ಗೆ ಗುಂಡು ತಗುಲಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

Firing, stone pelting on Police during Laxmi idol immersion in Bihar
ಲಕ್ಷ್ಮೀ ಮೂರ್ತಿ ನಿಮಜ್ಜನ ವೇಳೆ ಗುಂಡಿನ ದಾಳಿ, ಕಲ್ಲು ತೂರಾಟ: ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಗಾಯ
author img

By

Published : Nov 7, 2021, 9:34 AM IST

ಗಯಾ (ಬಿಹಾರ್​​): ಬಿಹಾರದ ಗಯಾದಲ್ಲಿ ಶನಿವಾರ ನಡೆದ ಲಕ್ಷ್ಮೀ ಪೂಜೆಯ ಸಂಭ್ರಮದ ವೇಳೆ ಕೆಲವರು ಗುಂಡಿನ ದಾಳಿ ಮತ್ತು ಕಲ್ಲು ತೂರಾಟದಲ್ಲಿ ತೊಡಗಿದ್ದರಿಂದ ಒಬ್ಬ ಪೊಲೀಸ್ ಅಧಿಕಾರಿಗೆ ಗುಂಡೇಟು ತಗುಲಿದ್ದರೆ, ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಗಯಾದ ತನಕುಪ್ಪಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೇವಿ ವಿಗ್ರಹವನ್ನು ನಿಮಜ್ಜನ ಮಾಡುವಾಗ ಜೋರಾಗಿ ಹಾಕಿದ್ದ ಸಂಗೀತವನ್ನು ನಿಲ್ಲಿಸುವಂತೆ ಪೂಜೆಯ ಆಯೋಜಕರಿಗೆ ಪೊಲೀಸ್ ಸಿಬ್ಬಂದಿ ಸೂಚಿಸಿದ್ದರು. ಈ ಹಿನ್ನೆಲೆ ಪೂಜೆಯ ಸಂಭ್ರಮದಲ್ಲಿದ್ದ ಕೆಲವರು ರೊಚ್ಚಿಗೆದ್ದು ಗುಂಡಿನ ದಾಳಿ ಮತ್ತು ಕಲ್ಲು ತೂರಾಟ ಮಾಡಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ)ಗೆ ಗುಂಡು ತಗುಲಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎಸ್‌ಹೆಚ್‌ಒ ಅಜಯ್ ಕುಮಾರ್ ಅವರ ಎಡಗಾಲಿಗೆ ಗುಂಡು ತಗುಲಿದೆ. ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.