ಇಂದೋರ್(ಮಧ್ಯಪ್ರದೇಶ): ಎರಡು ಅಂತಸ್ತಿನ ಕಟ್ಟಡದಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಏಳು ಮಂದಿ ಸಜೀವ ದಹನವಾಗಿದ್ದು, ಇದುವರೆಗೆ ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದೋರ್ನ ಸ್ವರ್ಣ ಬಾಗ್ ಕಾಲೋನಿಯಯಲ್ಲಿ ಈ ಅವಘಡ ಸಂಭವಿಸಿದೆ.
-
#UPDATE इंदौर में दो मंजिला इमारत में आग लगने से सात लोगों की मृत्यु हुई है: ANI से बात करते हुए इंदौर के पुलिस आयुक्त हरिनारायणचारी मिश्र pic.twitter.com/KWloZdn37e
— ANI_HindiNews (@AHindinews) May 7, 2022 " class="align-text-top noRightClick twitterSection" data="
">#UPDATE इंदौर में दो मंजिला इमारत में आग लगने से सात लोगों की मृत्यु हुई है: ANI से बात करते हुए इंदौर के पुलिस आयुक्त हरिनारायणचारी मिश्र pic.twitter.com/KWloZdn37e
— ANI_HindiNews (@AHindinews) May 7, 2022#UPDATE इंदौर में दो मंजिला इमारत में आग लगने से सात लोगों की मृत्यु हुई है: ANI से बात करते हुए इंदौर के पुलिस आयुक्त हरिनारायणचारी मिश्र pic.twitter.com/KWloZdn37e
— ANI_HindiNews (@AHindinews) May 7, 2022
ಘಟನೆಯ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ: ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಜಯನಗರ ಬಡಾವಣೆಯ ಸ್ವರ್ಣಬಾಗ್ ಕಾಲೋನಿಯಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗ್ತಿದೆ. ಘಟನೆ ಕುರಿತ ಮಾಹಿತಿ ಮೇರೆಗೆ ಇಂದೋರ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಶಾಸಕ ಮಹೇಂದ್ರ ಹಾರ್ದಿಯಾ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಮೂವರು ಮಹಿಳೆಯರು, ಮಗು ಸೇರಿ ಏಳು ಜನ ಸ್ಥಳದಲ್ಲೇ ಸಾವು