ETV Bharat / bharat

ಮುಂಬೈನ 64 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ದುರಂತ: 19 ಅಂತಸ್ತಿನಿಂದ ಕೆಳಗೆ ಬಿದ್ದು ಸೆಕ್ಯೂರಿಟಿ ಗಾರ್ಡ್‌ ಸಾವು - ಮುಂಬೈನಲ್ಲಿ ಮತ್ತೊಂದು ಭಾರಿ ಅಗ್ನಿ ದುರಂತ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಸುಮಾರು 10 ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ!

ಮುಂಬೈನ 64 ಅಂತಸ್ತಿನ ಬೃಹತ್‌ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ 30 ವರ್ಷದ ವರುಣ್‌ ತಿವಾರಿ ಎಂಬ ಸೆಕ್ಯೂರಿಟಿ ಗಾರ್ಡ್‌ ಮೃತಪಟ್ಟಿದ್ದಾನೆ. ಫ್ಲ್ಯಾಟ್‌ಗೆ ಆವರಿಸಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಈತ ಸುಮಾರು 19 ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Fire broke out at the multi-storey Avighna park apartment on Curry Road, around 12 noon today
ಮುಂಬೈನಲ್ಲಿ ಮತ್ತೊಂದು ಭಾರಿ ಅಗ್ನಿ ದುರಂತ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಸುಮಾರು 10 ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ!
author img

By

Published : Oct 22, 2021, 12:58 PM IST

Updated : Oct 22, 2021, 3:15 PM IST

ಮುಂಬೈ(ಮಹಾರಾಷ್ಟ್ರ): ಮುಂಬೈನ ಕರಿ ರಸ್ತೆ ಪ್ರದೇಶದಲ್ಲಿ 64 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಅಗ್ನಿ ದುರಂತದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮೃತಪಟ್ಟಿದ್ದಾನೆ. 30 ವರ್ಷದ ಅರುಣ್‌ ತಿವಾರಿ ಮೃತ ದುರ್ದೈವಿಯಾಗಿದ್ದಾನೆ. ಕ್ಷಣಾರ್ಧದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸೆಕ್ಯೂರಿಟಿ ಗಾರ್ಡ್‌ 19ನೇ ಅಂತಸ್ತಿನ ಫ್ಲಾಟ್‌ನಿಂದ ಹೊರಗಡೆ ಬಂದಿದ್ದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಮುಂಬೈನ 64 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ದುರಂತ: 19 ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ

ತಿವಾರಿ ಅವರನ್ನು ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಗೆ (ಕೆಇಎಂ) ಸಾಗಿಸಲಾಯಿತಾದರೂ ಆ ವೇಳೆ ಆತ ಮೃತಪಟ್ಟಿದ್ದ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದಾರೆ.

ಸದ್ಯ ಬೆಂಕಿಯನ್ನು ನಂದಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್ ಹೇಳಿದ್ದಾರೆ. ಬೆಂಕಿಯನ್ನು ನಂದಿಸಲು 15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ಇತರ ಮಹಡಿಗಳಿಗೆ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಸ್ಪಷ್ಟ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಯುತ್ತಿದ್ದಾರೆ.

Last Updated : Oct 22, 2021, 3:15 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.