ತಿರುವನಂತಪುರಂ (ಕೇರಳ) : ಇಲ್ಲಿನ ಪ್ರಸಿದ್ಧ ಕೊಲಾಚೆಲ್ ಮಂಡಕ್ಕಡು ಭಾಗವತಿ ಅಮ್ಮನ್ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಲಾಕ್‌ಡೌನ್ ಇರುವುದರಿಂದ ಅನಾಹುತ ತಪ್ಪಿದೆ.
ದೇವಸ್ಥಾನದ ಛಾವಣಿಗೆ ಬೆಂಕಿ ಹರಡಿದ್ದು ಸ್ವಲ್ಪ ಮಟ್ಟಿಗೆ ಸುಟ್ಟು ಕರಕಲಾಗಿದೆ. ದೇವಾಲಯದ ಆವರಣದಲ್ಲಿ ಜನರಿಲ್ಲದ ಕಾರಣ ಭಾರಿ ಅಪಘಾತ ತಪ್ಪಿದಂತಾಗಿದೆ. ದೇವತೆಯ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ.
ಪ್ರಾಥಮಿಕ ವರದಿಗಳ ಪ್ರಕಾರ, ದೀಪದಿಂದ ಬೆಂಕಿ ಹರಡಿರಬಹುದು ಎನ್ನಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಥಕ್ಲೇ ಮತ್ತು ಕೊಲಾಚೆಲ್‌ನ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.