ಕಾನ್ಪುರ (ಉತ್ತರ ಪ್ರದೇಶ): ಇಂದು ನಸುಕಿನ ಜಾವ 4 ಗಂಟೆಗೆ ಉತ್ತರ ಪ್ರದೇಶದ ಕಾನ್ಪುರದ ಕಹೂ ಕೋಠಿ ಮಾರುಕಟ್ಟೆಯಲ್ಲಿರುವ ಸಿಹಿತಿಂಡಿಗಳ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ರಾಜ್ ಕಿಶೋರ್ ಸ್ವೀಟ್ ಶಾಪ್ನಲ್ಲಿ ಮಲಗಿದ್ದ ಕೆಲಸಗಾರರಾದ ಶ್ಯಾಮ್ ನಾರಾಯಣ್ ಮತ್ತು ಸನ್ನಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕೆಲಸಗಾರ ಮೋಹಿತ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನಲ್‌ಗಂಜ್ ಕಾನ್ಪುರ ನಗರದ ಅಗ್ನಿಶಾಮಕ ಅಧಿಕಾರಿ ರಮೇಶ್ ಚಂದ್ರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಹೊತ್ತಿ ಉರಿದ ಗ್ರೋತ್ ಸೆಂಟರ್..13ಕ್ಕೂ ಹೆಚ್ಚು ಜನಕ್ಕೆ ಸುಟ್ಟ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ!
ಅಂಗಡಿಯು ಮೂರು ಅಂತಸ್ತಿನ ಕಟ್ಟಡವಾಗಿತ್ತು. ಸ್ವೀಟ್ ಅಂಗಡಿಯಲ್ಲಿ ಎಣ್ಣೆ, ತುಪ್ಪ, ಡಾಲ್ಡಾ ಮುಂತಾದ ದಹನಕಾರಿ ವಸ್ತುಗಳಿದ್ದ ಕಾರಣ ಬೆಂಕಿ ವ್ಯಾಪಿಸಿದೆ. 10 ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ