ಥಾಣೆ(ಮಹಾರಾಷ್ಟ್ರ): ಭಿವಾಂಡಿ ನಗರದ ಖಂಡುಪಾಡಾ ಪ್ರದೇಶದ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮದುವೆ ಟೆಂಟ್ ಬಳಿ ಇದ್ದ 20 ರಿಂದ 25 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ನಿನ್ನೆ (ಭಾನುವಾರ) ರಾತ್ರಿ ಭಿವಾಂಡಿ ನಗರದ ಖಂಡುಪಾಡಾ ಪ್ರದೇಶದ ಅನ್ಸಾರಿ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ, ವಾಹನ ನಿಲುಗಡೆ ಸ್ಥಳದ ಬಯಲು ಜಾಗದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು. ಪಟಾಕಿ ಸಿಡಿದ ಪರಿಣಾಮ ಮದುವೆ ಟೆಂಟ್‌ಗೆ ಬೆಂಕಿ ತಗುಲಿದೆ.
ಬಳಿಕ ಬೆಂಕಿ ನಿಧಾನವಾಗಿ ಹರಡಿದ್ದು, ಟೆಂಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಸುಮಾರು 20 ರಿಂದ 25 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ಎರಡೂವರೆ ಗಂಟೆಗಳ ಪ್ರಯತ್ನದ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 'ಓಮಿಕ್ರೋನ್' ಭೀತಿ : ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ