ETV Bharat / bharat

DIG Suicide case: ಡಿಐಜಿ ವಿಜಯಕುಮಾರ್ ಆತ್ಮಹತ್ಯೆ.. ಕ್ಯಾಂಪ್ ಕಚೇರಿಯಲ್ಲಿ ಏನಾಯ್ತು? ಗನ್‌ಮ್ಯಾನ್ ನೀಡಿದ ಮಾಹಿತಿ ಇಲ್ಲಿದೆ

ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಅಂಗರಕ್ಷಕ ನೀಡಿದ ಮಾಹಿತಿ ಮೇರೆಗೆ ಎಫ್​ಐಆರ್ ದಾಖಲಾಗಿದೆ.

DIG Vijayakumar Suicide
ಡಿಐಜಿ ವಿಜಯಕುಮಾರ್ ಆತ್ಮಹತ್ಯೆ
author img

By

Published : Jul 8, 2023, 12:10 PM IST

ಕೊಯಮತ್ತೂರು : ಕೊಯಮತ್ತೂರು ಕಾರ್ಗೋ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ್ (45) ಅವರು ಪಾಂಥಯ ಸಲೈನಲ್ಲಿರುವ ತಮ್ಮ ಕ್ಯಾಂಪ್ ಕಚೇರಿಯಲ್ಲಿ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಕುರಿತು ಅವರ ಗನ್​ಮ್ಯಾನ್ ರವಿಚಂದ್ರನ್ ಹೇಳಿಕೆ ಆಧರಿಸಿ ಎಫ್​ಐಆರ್ ದಾಖಲಿಸಲಾಗಿದೆ.

ವಿಜಯಕುಮಾರ್ ಆತ್ಮಹತ್ಯೆಗೆ ಕಾರಣವನ್ನು ಪತ್ತೆಹಚ್ಚುವಂತೆ ಡಿಜಿಪಿ ಶಂಕರ್ ಜಿವಾಲ್ ಅವರು ಎಡಿಜಿಪಿ ಅರುಣ್​ ಅವರಿಗೆ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಡಿಜಿಪಿ ಅರುಣ್ ಕುಮಾರ್ ಅವರು, ಕಳೆದ ಕೆಲವು ದಿನಗಳಿಂದ ಡಿಐಜಿ ವಿಜಯಕುಮಾರ್ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೌನ್ಸೆಲಿಂಗ್ ಕೂಡ ಪಡೆಯುತ್ತಿದ್ದರು. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ, ಗನ್‌ಮ್ಯಾನ್ ರವಿಚಂದ್ರನ್ ಅವರು ವಿಜಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಮ್ಮ ತಪ್ಪೊಪ್ಪಿಗೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಕೊಯಮತ್ತೂರಿನ ರಾಮನಾಥಪುರಂ ಪೊಲೀಸ್ ಠಾಣೆಯಲ್ಲಿ ವಿಜಯಕುಮಾರ್ ಅವರ ಆಪ್ತ ಸಿಬ್ಬಂದಿ ರವಿಚಂದ್ರನ್ ನೀಡಿರುವ ಲಿಖಿತ ಮಾಹಿತಿ ಲಭ್ಯವಾಗಿದೆ. ಈರೋಡ್ ಸಶಸ್ತ್ರ ಪಡೆಗಳ ಕಾನ್ಸ್​ಟೇಬಲ್ ರವಿಚಂದ್ರನ್ (35) ಎಂಬುವರು ಸಲ್ಲಿಸಿರುವ ದೂರಿನಲ್ಲಿ, "ನಾನು ಈರೋಡ್ ಜಿಲ್ಲಾ ಸಶಸ್ತ್ರ ಪಡೆಗಳಲ್ಲಿ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. 2011ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದೆ. 2016 ರಿಂದ ಕೊಯಮತ್ತೂರಿನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸರಿಗೆ ಖಾಸಗಿ ಭದ್ರತಾ ಸಿಬ್ಬಂದಿಯಾಗಿ (GUN MAN) ಕೆಲಸ ಮಾಡುತ್ತಿದ್ದೇನೆ.

ಕೊಯಮತ್ತೂರಿನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅವರ ಭದ್ರತಾ ಕರ್ತವ್ಯಕ್ಕಾಗಿ ಜಿಲ್ಲಾ ಸಶಸ್ತ್ರ ಪಡೆಗಳಿಂದ ನನಗೆ ಪಿಸ್ತೂಲ್ ನೀಡಲಾಗಿದೆ. ಜುಲೈ 7 ರಂದು ಉಪ ಪೊಲೀಸ್ ಆಯುಕ್ತರ ಕ್ಯಾಂಪ್ ಕಚೇರಿಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಜುಲೈ 6 ರಂದು ಡಿಐಜಿ ವಿಜಯಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಹೊರಗೆ ಹೋಗಿದ್ದರು, ನಾವು ರಾತ್ರಿ 9 ಗಂಟೆಗೆ ಮನೆ ತಲುಪಿದೆವು. ನಾನು ಕ್ಯಾಂಪ್ ಆಫೀಸ್‌ನಲ್ಲಿ ನನಗೆ ನಿಗದಿಪಡಿಸಿದ ಕೋಣೆಯಲ್ಲಿ ಉಳಿದುಕೊಂಡೆ.

ವಿಜಯಕುಮಾರ್ ಅವರು ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಕೆಳಗಿನ ಡಿಎಸ್ಆರ್ ಕೊಠಡಿಗೆ ಬರುತ್ತಾರೆ. ಅವರು ಜುಲೈ 7 ರಂದು ಬೆಳಗ್ಗೆ 6.30 ರ ಸುಮಾರಿಗೆ ಕೆಳಗೆ ಬಂದರು. ಶಿಬಿರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್​ಟೇಬಲ್ ರವಿವರ್ಮ ಅವರ ಬಳಿ ಹಾಲು ನೀಡುವಂತೆ ಕೇಳಿದರು. ಬೆಳಗ್ಗೆ 6.40 ರ ಸುಮಾರಿಗೆ ಹಾಲು ಕುಡಿದು ನನ್ನ ಕೋಣೆಗೆ ಬಂದು ಟಿಎಸ್ಆರ್ ಕೇಳಿದರು. ನಾನು TSR ತೆಗೆದುಕೊಂಡೆ. ನಂತರ ಅವರು ನಾನು ಉಳಿದುಕೊಂಡಿದ್ದ ಕೋಣೆಯಲ್ಲಿ ನನ್ನ ಪಿಸ್ತೂಲ್ ಇರಿಸಿದ್ದ ಸ್ಥಳಕ್ಕೆ ಹೋಗಿ ನನ್ನ ಗನ್ ತೆಗೆದುಕೊಂಡು ಅದನ್ನು ಹೇಗೆ ಬಳಸುವುದು ಎಂದು ನನ್ನೊಂದಿಗೆ ಮಾತನಾಡುತ್ತ ಕೋಣೆಯಿಂದ ಹೊರಟುಹೋದರು. ನಾನು ಟೀ ಶರ್ಟ್ ಹಾಕಿಕೊಂಡು ಹೊರಗೆ ಬರುವ ಮುನ್ನ ಗುಂಡಿನ ಸದ್ದು ಕೇಳಿಸಿತು. ಕೂಡಲೇ ನಾನು ಮತ್ತು ನನ್ನೊಂದಿಗೆ ರೂಮಿನಲ್ಲಿದ್ದ ಕ್ಯಾಂಪ್ ಆಫೀಸ್ ಡ್ರೈವರ್ ಅನ್ಬಜಗನ್ ಹೊರಗೆ ಓಡಿ ಬಂದೆವು.

ಇದನ್ನೂ ಓದಿ : DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ

ಈ ವೇಳೆ ಡಿಐಜಿ ತಲೆಯಿಂದ ರಕ್ತ ಬಂದು ಕೆಳಗೆ ಬಿದ್ದಿದ್ದರು. ಪಕ್ಕದಲ್ಲಿ ಬಂದೂಕು ಕೂಡ ಬಿದ್ದಿತ್ತು. ತಕ್ಷಣ ಕಚೇರಿಯಿಂದ ಬೊಲೆರೋ ವಾಹನದಲ್ಲಿ ಸುಮಾರು 7 ಗಂಟೆಗೆ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದೆವು. ನಮ್ಮ ಜೊತೆಯಲ್ಲಿ ಸೆಂಟ್ರಿ ಗಾರ್ಡ್ ಶ್ರೀನಾಥ್ ಇದ್ದರು. ಡಿಐಜಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಆದರೆ, ಯಾಕೆ ಗುಂಡು ಹಾರಿಸಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ'’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.