ETV Bharat / bharat

"ಐ ಲವ್ ಯೂ ಮೇರಿ ಜಾನ್​" ಎಂದ ವಿದ್ಯಾರ್ಥಿಗಳು ವಿರುದ್ಧ ಕೇಸ್​ ದಾಖಲಿಸಿದ ಶಿಕ್ಷಕಿ

ಮೀರತ್‌ನಲ್ಲಿ ಮೂವರು ವಿದ್ಯಾರ್ಥಿಗಳು ಶಿಕ್ಷಕಿಗೆ ಅಣುಕಿಸುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಈ ಸಂಬಂಧ ಶಿಕ್ಷಕಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

author img

By

Published : Nov 27, 2022, 6:12 PM IST

Etv Bharatfir against three student in meerut over eve teasing teacher
Etv Bharat"ಐ ಲವ್ ಯೂ ಮೈ ಲವ್" ಎಂದ ವಿದ್ಯಾರ್ಥಿಗಳ ವಿರುದ್ಧ ಕೇಸ್​ ದಾಖಲಿಸಿದ ಶಿಕ್ಷಕಿ

ಮೀರತ್​(ಉತ್ತರ ಪ್ರದೇಶ): ಶಾಲೆಯ ಶಿಕ್ಷಕಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಶಿಕ್ಷಕಿಗೆ ಪ್ರತಿದಿನ ತರಗತಿಯಲ್ಲಿ ಮತ್ತು ಶಾಲೆಯ ಆವರಣದಲ್ಲಿ "ಐ ಲವ್ ಯೂ ಮೇರಿ ಜಾನ್" ಎಂದು ಅಣುಕಿಸುತ್ತಿದ್ದರು ಮತ್ತು ಅಶ್ಲೀಲ ಪದಗಳಿಂದ ನಿಂದನೆ ಮಾಡುತ್ತಿದ್ದರು.

ಹೀಗೆಲ್ಲಾ ಮಾಡಬೇಡಿ ಎಂದು ಶಿಕ್ಷಕಿ ಸಮಾಧಾದಿಂದ ಕೇಳಿಕೊಂಡರೂ ಸಹ ವಿದ್ಯಾರ್ಥಿಗಳು ಸುಮ್ಮನಾಗಲಿಲ್ಲ ಮತ್ತೆ ಆದೇ ರೀತಿಯಲ್ಲಿ ಅಣುಕಿಸುವುದನ್ನು ಮುಂದುವರೆಸಿದ್ದರು. ಇದರಿಂದ ಮನನೊಂದ ಶಿಕ್ಷಕಿ ಮೂವರು ವಿದ್ಯಾರ್ಥಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದಾರೆ.

ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಐಟಿ ಕಾಯ್ದೆ ಉಲ್ಲಂಘನೆ ಮತ್ತು ಕಿರುಕುಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಶುಚಿತಾ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಕ್ಷಸನಾದ ಶಿಕ್ಷಕ.. ಮಗ್ಗಿ ಮರೆತ ವಿದ್ಯಾರ್ಥಿ ಕೈ ಡ್ರಿಲ್ ಮಷಿನ್​ನಿಂದ ಕೊರೆದ ಗುರುವಿನ ವಿರುದ್ಧ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.