ನವದೆಹಲಿ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 236 ಕೋಟಿ ರೂ.ಗಳ ನಷ್ಟ ಆರೋಪಕ್ಕೆ ಸಂಬಂಧಿಸಿದಂತೆ ಫರೀದಾಬಾದ್ನ ಟೆಕ್ಸ್ಟ್ಟೈಲ್ ಉದ್ಯಮವಾದ ರಿಚಾ ಇಂಡಸ್ಟ್ರೀಸ್ ಲಿಮಿಟೆಡ್, ಅದರ 11 ನಿರ್ದೇಶಕರು, ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ರಿಚಾ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಮೋಸ, ಪೋರ್ಜರಿ, ಪಿತೂರಿ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 409, 420, 467, 467 ಮತ್ತು 471ರ ಅಡಿಯಲ್ಲಿ ಹಾಗೂ ಭ್ರಷ್ಟಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13 (2) ಮತ್ತು 13 (1) (ಡಿ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದೆ.
ಇದನ್ನೂಓದಿ: ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ನೂರಾರು ಕೋಟಿ ನಾಮ ಹಾಕಿದ್ದವರ ಬಂಧನ
ರಿಚಾ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಗುಪ್ತಾ, ಆರು ನಿರ್ದೇಶಕರಾದ ಮನೀಶ್ ಗುಪ್ತಾ, ಸುಶೀಲ್ ಗುಪ್ತಾ, ಲವೇಶ್ ಕನ್ಸಾಲ್, ಸೋನಿಯಾ ತಹಿಲಿಯಾನಿ, ಜೈ ಪ್ರಕಾಶ್ ಮಲ್ಹೋತ್ರಾ ಮತ್ತು ನೀರಜ್ ಬಜಾಜ್, ಇಬ್ಬರು ಹೆಚ್ಚುವರಿ ನಿರ್ದೇಶಕರಾದ ಪ್ರಭಾಕರ್ ವಿ. ಕೊಟಕೋಟೆ, ಅಭಯ್ ಬನ್ಸಾಲ್ ಮತ್ತು ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರಾದ ನಿತಿನ್ ಅಗರ್ವಾಲ್, ಭಾವನಾ ಸಿಂಘಾಲ್ ಅವರ ಮೇಲೆ ಎಫ್ಐಆರ್ ದಾಖಲಿಸಿದೆ.
ರಿಚಾ ಇಂಡಸ್ಟ್ರೀಸ್ನ ಮತ್ತು ಕೆಲವು ಸರ್ಕಾರಿ ಅಧಿಕಾರಿಗಳು ಸಾಲ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಮತ್ತು ಸಾಲ ಪಡೆದ ಹಣವನ್ನು ಮರಳಿ ನೀಡದೇ ವಂಚಿಸಿ 236.74 ಕೋಟಿ ರೂಪಾಯಿಯಷ್ಟು ಬ್ಯಾಂಕ್‌ಗೆ ಮೋಸ ಮಾಡಿದ್ದಾರೆ ಎಂದು ಬ್ಯಾಂಕಿನ ಹಿರಿಯ ಉದ್ಯೋಗಿಯೊಬ್ಬರು ಏಜೆನ್ಸಿಗೆ ದೂರು ನೀಡಿದ ನಂತರ ಸಿಬಿಐ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ.
ರಿಚಾ ಇಂಡಸ್ಟ್ರೀಸ್ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ 2015ರಲ್ಲಿ ಕೆನರಾಬ್ಯಾಂಕ್ನಲ್ಲಿ ಸಾಲ ಪಡೆದಿತ್ತು. 2017 ಜುಲೈ ಹಾಗೂ ಡಿಸೆಂಬರ್ನಲ್ಲಿ ಎರಡೂ ಖಾತೆಗಳನ್ನು ನಿಷ್ಕ್ರಿಯವಾಗಿದ್ದು, ಕಾರ್ಯನಿರ್ವಹಿಸದ ಸ್ವತ್ತುಗಳಾಗಿ ಮಾರ್ಪಾಡಾಗಿದ್ದವು. ಬೇರೊಂದು ಕಾರ್ಯಕ್ಕೆ ಸಾಲವನ್ನು ಬಳಸಿಕೊಂಡಿರುವ ಆರೋಪವೂ ರಿಚಾ ಇಂಡಸ್ಟ್ರೀಸ್ ಮೇಲಿದೆ.