ETV Bharat / bharat

'ಕಾಳಿ' ಚಿತ್ರದ ವಿವಾದಾತ್ಮಕ ಪೋಸ್ಟರ್‌: ಲಖನೌದಲ್ಲಿ ನಿರ್ದೇಶಕಿ ವಿರುದ್ಧ ಎಫ್‌ಐಆರ್ - ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ಕಲಿ ಚಿತ್ರದ ಪೋಸ್ಟರ್‌ಗೆ ವಿರೋಧ

ಲಖನೌದ ವಜೀರ್‌ಗಂಜ್ ನಿವಾಸಿ ವೇದ್ ಪ್ರಕಾಶ್ ಶುಕ್ಲಾ ಮಣಿಮೇಕಲೈ ವಿರುದ್ಧ ದೂರು ನೀಡಿದ್ದು, ಇವರನ್ನೂ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದೆ.

ಲಕ್ನೋದಲ್ಲಿ ನಿರ್ದೇಶಕಿ ವಿರುದ್ಧ ಎಫ್‌ಐಆರ್
ಲಕ್ನೋದಲ್ಲಿ ನಿರ್ದೇಶಕಿ ವಿರುದ್ಧ ಎಫ್‌ಐಆರ್
author img

By

Published : Jul 5, 2022, 4:04 PM IST

Updated : Jul 5, 2022, 4:28 PM IST

ಲಖನೌ: ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ಕಾಳಿ ಚಿತ್ರದ ಪೋಸ್ಟರ್‌ಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟರ್‌ನಲ್ಲಿ ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಈ ಸಂಬಂಧ ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಚಿತ್ರ ನಿರ್ಮಾಪಕಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಮುಂಬರುವ ಕಿರುಚಿತ್ರ ಕಾಳಿ ಪೋಸ್ಟರ್ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಪೋಸ್ಟರ್‌ನಲ್ಲಿ, ದೇವಿ ಸಿಗರೇಟ್ ಸೇದುತ್ತಿರುವಂತೆ ಮತ್ತು ಒಂದು ಕೈಯಲ್ಲಿ ಎಲ್‌ಜಿಬಿಟಿ ಸಮುದಾಯದ ಧ್ವಜವನ್ನು ಹಿಡಿದುಕೊಂಡಂತೆ ಬಿಂಬಿಸಲಾಗಿದೆ.

ಲಖನೌದ ವಜೀರ್‌ಗಂಜ್ ನಿವಾಸಿ ವೇದ್ ಪ್ರಕಾಶ್ ಶುಕ್ಲಾ ಅವರು ದೂರು ನೀಡಿದ್ದಾರೆ. ಅದರಂತೆ ಈ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ, ನಿರ್ಮಾಪಕಿ ಆಶಾ, ಸಹವರ್ತಿ ಮತ್ತು ಸಂಕಲನಕಾರ ಶ್ರವಣ್ ಓಣಚನ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಜರತ್‌ಗಂಜ್ ಇನ್​ಸ್ಪೆಕ್ಟರ್ ಅಖಿಲೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಜುಲೈ 2 ರಂದು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತಮ್ಮ ಸಾಕ್ಷ್ಯ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಕೆನಡಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವರ ಚಿತ್ರ ಬಿಡುಗಡೆಯಾಗಿದೆ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀರ್ ಅಭಿಮಾನಿ

Last Updated : Jul 5, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.