ಗಾಜಿಯಾಬಾದ್ : ಜಿಮ್‌ನೊಳಗೆ ನಿಂತಿದ್ದ ಯುವಕನಿಗೆ ದುಷ್ಕರ್ಮಿಗಳು ಥಳಿಸಿರುವ ಸಿಸಿ ಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿ ಮತ್ತು ಉತ್ತರಪ್ರದೇಶ ಗಡಿಭಾಗವಾದ ಗಾಜಿಯಾಬಾದ್ನಲ್ಲಿರುವ ಬಂಟ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜಿಮ್ವೊಂದರಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಥಳಿತಕ್ಕೊಳಗಾದ ಯುವಕ ಹಾಗೂ ಮತ್ತೊಬ್ಬನ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಸಿಟ್ಟಿಗೆ ಗುಂಪು ಕಟ್ಟಿಕೊಂಡು ಬಂದು ಯುವಕನಿಗೆ ಥಳಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಮನೆಗೆ ನುಗ್ಗಿದ ಹೆಬ್ಬಾವು : watch video
ಸಿಸಿಟಿವಿ ದೃಶ್ಯದಲ್ಲಿ ಆರೋಪಿಗಳಿಂದ ರಕ್ಷಿಸಲು ಬಂದ ಯುವಕನ ಸ್ನೇಹಿತನಿಗೂ ಥಳಿಸಿರುವುದು ಕಂಡು ಬರುತ್ತದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.