ETV Bharat / bharat

Fever Survey: ತೆಲಂಗಾಣದಲ್ಲಿ 1 ಲಕ್ಷಕ್ಕೂ ಹೆಚ್ಚು ಕೋವಿಡ್ ರೋಗಲಕ್ಷಣವಿರುವವರು ಪತ್ತೆ - Health Minister T. Harish Rao inspected the fever survey

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಅಗತ್ಯ ಮೂಲಸೌಕರ್ಯಗಳು ಮತ್ತು ಔಷಧಿಗಳು ಲಭ್ಯವಿರುವುದರಿಂದ ತೀವ್ರತರವಾದ ರೋಗಲಕ್ಷಣಗಳನ್ನು ಹೊಂದಿರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಾದ್ಯಂತ 56,000 ಹಾಸಿಗೆಗಳು ಲಭ್ಯವಿದೆ. ಸರ್ಕಾರವು ಆಮ್ಲಜನಕ ಮತ್ತು ಅಗತ್ಯವಿರುವ ಎಲ್ಲಾ ಔಷಧಗಳ ಪೂರೈಕೆಯನ್ನು ಮಾಡಿದೆ ಎಂದು ಇದೇ ವೇಳೆ ಸಚಿವರು ಹೇಳಿದ್ದಾರೆ..

Fever Survey
ಫಿವರ್​​ ಸಮೀಕ್ಷೆ
author img

By

Published : Jan 23, 2022, 7:54 PM IST

ಹೈದರಾಬಾದ್ : ತೆಲಂಗಾಣ ರಾಜ್ಯಾದ್ಯಂತ ಫೀವರ್​​ ಸಮೀಕ್ಷೆ ನಡೆಸಲಾಗಿದೆ. ಮೊದಲ ಎರಡು ದಿನಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪತ್ತೆ ಹಚ್ಚಲಾಗಿದೆ.

ಆರೋಗ್ಯ ಕಾರ್ಯಕರ್ತರು ಹೈದರಾಬಾದ್ ಮತ್ತು ಇತರ ಎಲ್ಲಾ ಜಿಲ್ಲೆಗಳಲ್ಲಿ ಜ್ವರ ಹಾಗೂ ಕೋವಿಡ್-19ನ ಇತರ ರೋಗಲಕ್ಷಣಗಳಿಂದ ಬಳಲುತ್ತಿರುವ ಜನರನ್ನು ಗುರುತಿಸಲು ಮನೆ-ಮನೆಗೆ ತೆರಳುತ್ತಿದ್ದಾರೆ.

ಸಮೀಕ್ಷೆ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹೈದರಾಬಾದ್ ಸಮೀಪದ ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಾಪುರಂನಲ್ಲಿ ಭಾನುವಾರ ನಡೆದ ಜ್ವರ ಸಮೀಕ್ಷೆಯನ್ನು ಆರೋಗ್ಯ ಸಚಿವ ಟಿ. ಹರೀಶ್ ರಾವ್ ಪರಿಶೀಲಿಸಿದರು. ರೋಗ ಲಕ್ಷಣಗಳನ್ನು ಹೊಂದಿರುವವರಿಗೆ ಒಂದು ಲಕ್ಷಕ್ಕೂ ಹೆಚ್ಚು ಹೋಮ್ ಐಸೋಲೇಶನ್ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಸಮೀಕ್ಷೆಯ ಮೊದಲ ಎರಡು ದಿನಗಳಲ್ಲಿ 29.20 ಲಕ್ಷ ಮನೆಗಳಿಗೆ ಭೇಟಿ ನೀಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸಲಾಗಿದೆ. ಕೋವಿಡ್​-19ಗೆ ಜನ ಭಯಭೀತರಾಗಬಾರದು. ಅಲ್ಲದೇ ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವವರು ಔಷಧಿಗಳನ್ನು ಖರೀದಿಸಲು ಮೆಡಿಕಲ್ ಸ್ಟೋರ್‌ಗಳಿಗೆ ಧಾವಿಸಬೇಡಿ. ಏಕೆಂದರೆ, ಸರ್ಕಾರವು ಹೋಮ್ ಐಸೋಲೇಶನ್ ಕಿಟ್‌ಗಳನ್ನು ಉಚಿತವಾಗಿ ಪೂರೈಸುತ್ತಿದೆ ಎಂದು ಆರೋಗ್ಯ ಸಚಿವ ಟಿ. ಹರೀಶ್ ರಾವ್ ಹೇಳಿದ್ದಾರೆ.

ಓದಿ: ರಾಜ್ಯದಲ್ಲಿಂದು 50,210 ಜನರಿಗೆ ಕೊರೊನಾ ಪಾಸಿಟಿವ್.. ಶೇ. 22.77ಕ್ಕೆ ಏರಿತು ಪಾಸಿಟಿವಿಟಿ ದರ

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಅಗತ್ಯ ಮೂಲಸೌಕರ್ಯಗಳು ಮತ್ತು ಔಷಧಿಗಳು ಲಭ್ಯವಿರುವುದರಿಂದ ತೀವ್ರತರವಾದ ರೋಗಲಕ್ಷಣಗಳನ್ನು ಹೊಂದಿರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಾದ್ಯಂತ 56,000 ಹಾಸಿಗೆಗಳು ಲಭ್ಯವಿದೆ. ಸರ್ಕಾರವು ಆಮ್ಲಜನಕ ಮತ್ತು ಅಗತ್ಯವಿರುವ ಎಲ್ಲಾ ಔಷಧಗಳ ಪೂರೈಕೆಯನ್ನು ಮಾಡಿದೆ ಎಂದು ಇದೇ ವೇಳೆ ಸಚಿವರು ಹೇಳಿದ್ದಾರೆ.

ಕೋವಿಡ್‌ಗೆ ಪಾಸಿಟಿವ್‌ ಆಗಿರುವ ಗರ್ಭಿಣಿಯರು ಕೂಡ ಆತಂಕ ಪಡಬೇಕಿಲ್ಲ. ಅವರ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ಗರ್ಭಿಣಿಯರಿಗೆ ವಿಶೇಷ ವಾರ್ಡ್‌ ಮತ್ತು ವಿಶೇಷ ಆಪರೇಷನ್ ಥಿಯೇಟರ್‌ಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಜ್ವರ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ದೆಹಲಿ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ಪ್ರಕರಣಗಳು ಇಳಿಮುಖವಾಗಿವೆ. ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಪೌರಾಡಳಿತ, ಪಂಚಾಯತ್ ರಾಜ್ ಮತ್ತು ಇತರ ಇಲಾಖೆಗಳ ಸಮನ್ವಯದಲ್ಲಿ ಜನವರಿ 21ರಂದು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿತು ಎಂದು ಹರೀಶ್ ರಾವ್ ಹೇಳಿದರು.

ಓದಿ: ವೃದ್ಧರಲ್ಲಿ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ ವಾಕಿಂಗ್..

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC), ಇತರ ಮುನ್ಸಿಪಲ್ ಕಾರ್ಪೊರೇಶನ್‌ಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜ್ವರ, ಶೀತ ಮತ್ತು ಕೆಮ್ಮಿನಂತಹ ರೋಗಲಕ್ಷಣ ಇರುವವರನ್ನು ಪರಿಶೀಲಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಕಿಟ್‌ನಲ್ಲಿ ಒದಗಿಸಲಾದ ಔಷಧಿಗಳನ್ನು ಐದು ದಿನಗಳವರೆಗೆ ತೆಗೆದುಕೊಳ್ಳಬೇಕು. ಸರ್ಕಾರವು ಒಂದು ಕೋಟಿ ಕಿಟ್‌ಗಳನ್ನು ವಿತರಿಸಲು ಸಿದ್ಧವಾಗಿದೆ. ತೆಲಂಗಾಣದಲ್ಲಿ ಶನಿವಾರ 4,393 ಹೊಸ ಪ್ರಕರಣ ವರದಿಯಾಗಿವೆ. ಶೇ.60ರಷ್ಟು ಪ್ರಕರಣಗಳು ಜಿಎಚ್‌ಎಂಸಿ, ಮೇಡ್ಚಲ್ ಮಲ್ಕಾಜ್‌ಗಿರಿ ಮತ್ತು ರಂಗಾರೆಡ್ಡಿಯಿಂದ ವರದಿಯಾಗಿವೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಪಾಸಿಟಿವಿಟಿ ದರವು ಸುಮಾರು ಶೇ.3.7ರಷ್ಟು ಕಡಿಮೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 31,199ಕ್ಕೆ ಏರಿಕೆಯಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.