ಮೋತಿಹಾರಿ (ಬಿಹಾರ): ಒಂದೇ ಬಾರಿಗೆ ಮೂರು ಅಥವಾ 4 ಮಕ್ಕಳು ಹುಟ್ಟಿದ ಸುದ್ದಿಯನ್ನು ನಾವು ನೀವೆಲ್ಲಾ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲಿ ಹುಟ್ಟುವ ಮಗುವಿನೊಳಗೆ ಮಗು ಇರುವಂತಹ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರದ ಮೋತಿಹಾರಿಯಲ್ಲಿ 40 ದಿನದ ಹಿಂದೆ ಜನಿಸಿದ ಮಗುವಿನಲ್ಲಿ ಭ್ರೂಣವು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಭ್ರೂಣವನ್ನು ತೆಗೆದುಹಾಕಲಾಗಿದೆ.
ವೈದ್ಯಕೀಯ ಜಗತ್ತಿಗೆ ಅಪರೂಪದಲ್ಲಿಯೇ ಅಪರೂಪವಾದ ಪ್ರಕರಣ ಇದಾಗಿದೆ. ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಇಂತಹ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಕುಟುಂಬಸ್ಥರ ಪ್ರಕಾರ, ಮಗು ಜನಿಸಿದ ಕೆಲವು ದಿನಗಳ ನಂತರ, ಮಗುವಿನ ಹೊಟ್ಟೆಯ ಕೆಳಗೆ ಒಂದು ಗಡ್ಡೆ ಊದಿಕೊಳ್ಳಲು ಪ್ರಾರಂಭಿಸಿತು. ಕುಟುಂಬಸ್ಥರು ಮಗುವಿನೊಂದಿಗೆ ಮೋತಿಹಾರಿಯ ರಹಮಾನಿಯಾ ವೈದ್ಯಕೀಯ ಆಸ್ಪತ್ರೆಗೆ ಹೋದಾಗ, ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದ ನಂತರ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ತಿಳಿದಿದೆ.
ಪುಟ್ಟ ಮಗುವಿಗೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವಿನ ಆರೋಗ್ಯ ಚೆನ್ನಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಮಗುವಿಗೆ ಚಿಕಿತ್ಸೆ ನೀಡಿದ ರಹಮಾನಿಯಾ ಮೆಡಿಕಲ್ ಸೆಂಟರ್‌ನ ಡಾ.ಒಮರ್ ತಬ್ರೇಜ್ ಪ್ರಕಾರ, ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಫಿಟ್ಸ್ ಇನ್ ಫಿಟು' ಎಂದು ಕರೆಯಲಾಗುತ್ತದೆ. ಪುಟ್ಟ ಮಗುವಿನೊಳಗೆ 40 ದಿನದ ಮಗುವಿತ್ತು. ಮತ್ತೊಂದು ಸತ್ತ ಭ್ರೂಣ ಮಗುವಿನೊಳಗಿತ್ತು. ಇದರಿಂದ ಮಗುವಿಗೆ ತೊಂದರೆ ಆಗುತ್ತಿತ್ತು. ಇದು ಅಪರೂಪದ ಪ್ರಕರಣವಾಗಿದ್ದು, ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಲಡಾಖ್‌ನಲ್ಲಿ ಸೇನಾ ಬಸ್ ದುರಂತ ಪ್ರಕರಣ : ಚಾಲಕನ ಪಾತ್ರದ ಬಗ್ಗೆ ತನಿಖೆ