ETV Bharat / bharat

ಫೆರ್ರಿಸ್ ವ್ಹೀಲ್‌ನಿಂದ ಬಿದ್ದು ಐವರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ

70 ಅಡಿ ಎತ್ತರದ ಫೆರ್ರಿಸ್ ವ್ಹೀಲ್​ನಿಂದ ಕೆಳಗೆ ಬಿದ್ದು ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಈ ದುರ್ಘಟನೆ ಬಿಹಾರದಲ್ಲಿ ಸಂಭವಿಸಿದೆ.

author img

By

Published : Nov 21, 2022, 8:25 AM IST

Five injured in fall from Ferris wheel
ಫೆರ್ರಿಸ್ ವ್ಹೀಲ್‌ನಿಂದ ಬಿದ್ದು ಐವರಿಗೆ ಗಾಯ

ಪಾಟ್ನಾ(ಬಿಹಾರ): ಬಿಹಾರದ ಸೋನ್‌ಪುರ ಜಾತ್ರೆಯಲ್ಲಿ 70 ಅಡಿ ಎತ್ತರದ ಫೆರ್ರಿಸ್ ವ್ಹೀಲ್‌ನಿಂದ ಕೆಳಗೆ ಬಿದ್ದು ಐವರು ಗಾಯಗೊಂಡರು. ಈ ಪೈಕಿ ಓರ್ವನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ನಿನ್ನೆ ಸಂಜೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಒಬ್ಬ ಹೈಟೆನ್ಷನ್ ವಿದ್ಯುತ್ ತಂತಿಯ ಮೇಲೆ ಅಪ್ಪಳಿಸಿದ್ದು ಆತನಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಅಮನ್ ಖಾನ್ ಎಂದು ಗುರುತಿಸಲಾಗಿದೆ. ಸಂತ್ರಸ್ತರನ್ನು ಚಿಕಿತ್ಸೆಗಾಗಿ ಪಾಟ್ನಾ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಫೆರ್ರಿಸ್ ವ್ಹೀಲ್ ನಿರ್ವಾಹಕರು ಮತ್ತು ಸ್ವಿಂಗ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸೋನ್‌ಪುರ್ ಎಸ್‌ಎಚ್‌ಒ ಸಂಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ಇದನ್ನೂ ಓದಿ: ಪಾದಚಾರಿಗಳಿಗೆ ವೇಗವಾಗಿ ಬಂದು ಗುದ್ದಿದ ಟ್ರಕ್​: ಎಂಟು ಜನರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.