ಕೋಲ್ಕತ್ತಾ: ಇತ್ತೀಚಿಗಷ್ಟೆ ತೃಣಮೂಲ ಕಾಂಗ್ರಸ್ನಿಂದ ಹೊರಬಂದು ಬಿಜೆಪಿ ಸೇರಿಕೊಂಡಿದ್ದ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸುವೇಂದು ಅಧಿಕಾರಿ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ. ನಾನು 21 ವರ್ಷಗಳ ಕಾಲ ಟಿಎಂಸಿಯಲ್ಲಿ ಇದ್ದಿದ್ದಕ್ಕೆ ನನಗೆ ನಿಜವಾಗಿಯೂ ನಾಚಿಕೆಯಾಗುತ್ತಿದೆ ಎಂದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಸುವೇಂದು ಅಧಿಕಾರಿ, ಟಿಎಂಸಿ ಯಾವುದೇ ಶಿಸ್ತು ಹೊಂದಿರದ ಪಕ್ಷ, ಅದೊಂದು ಕಂಪನಿಯಾಗಿ ಮಾರ್ಪಟ್ಟಿದೆ. ಇದಕ್ಕಾಗಿ ನಾವು ಕಂಪನಿಯಿಂದ ಹೊರಬಂದು ನಿಜವಾದ ರಾಜಕೀಯ ಪಕ್ಷ ಸೇರಿಕೊಂಡಿದ್ದೇವೆ ಎಂದಿದ್ದಾರೆ. 2 ದಶಕಗಳ ಕಾಲ ಬಂಗಾಳವು ಒಂದು ಪಕ್ಷದಿಂದ ನರಳುತ್ತಿದೆ. ಕಳೆದ 34 ವರ್ಷದ ಸಿಪಿಐಎಂ ಸರ್ಕಾರವು ಇದನ್ನೇ ಮಾಡಿತ್ತು. ಬಳಿಕ ಮಮತಾ ಸರ್ಕಾರವೂ ಸಹ ಇದನ್ನೇ ಮುಂದುವರಿಸಿದೆ ಎಂದಿದ್ದಾರೆ.
ಬಿಜೆಪಿಯಿಂದ ಮಾತ್ರ ಜನರಿಗೆ, ಜನರಿಂದ, ಜನರಿಗಾಗಿ ಸರ್ಕಾರ ನಡೆಸುವ ಸಾಮರ್ಥ್ಯವಿದೆ. ಮಮತಾ ಸರ್ಕಾರವೂ ಪಕ್ಷಕ್ಕೆ, ಪಕ್ಷದಿಂದ, ಪಕ್ಷಕ್ಕಾಗಿ ಎಂಬ ನೀತಿ ಅನುಸರಿಸುತ್ತಿದೆ ಎಂದಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವೇ ಬಂಗಾಳದಲ್ಲೂ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಇದಕ್ಕೂ ಮೊದಲು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವಷ್ಟೇ ನಿದ್ದೆ ಮಾಡುತ್ತೇನೆ ಎಂದು ಸವಾಲು ಹಾಕಿ, ಈ ಬಾರಿ ಬಿಜೆಪಿ ಅತ್ಯಧಿಕ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ದೀದಿ ಕ್ಯಾಬಿನೆಟ್ ಸಭೆಗೆ ಗೈರಾದ ನಾಲ್ವರು ಮಿನಿಸ್ಟರ್ಸ್ಸ್.. ಶುರುವಾಯ್ತಾ ರಾಜೀನಾಮೆ ಪರ್ವ..!!?
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೀದಿ ಸರ್ಕಾರದ ಶಾಸಕರು, ಸಚಿವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಾಜಿ ಸಾರಿಗೆ ಸಚಿವ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ಗೆ ರಾಜಿನಾಮೆ ನೀಡಿದ ಒಂದು ದಿನದ ಬಳಿಕ ಬಾರಕ್ಪೊರ್ ಶಾಸಕ ಶಿಲ್ಬದ್ರಾ ದತ್ತಾ ಸಹ ರಾಜೀನಾಮೆ ನೀಡಿದ್ದರು.