ನವದೆಹಲಿ : ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಿಗೆ ಕಾಂಗ್ರೆಸ್ ತನ್ನ ವೀಕ್ಷಕರನ್ನು ನೇಮಿಸಿದೆ. ಮಹಾರಾಷ್ಟ್ರ ವೀಕ್ಷಕರಾಗಿ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹರಿಯಾಣ ವೀಕ್ಷಕರಾಗಿ ಭುಪೇಶ್ ಬಘೇಲ್ ಮತ್ತು ರಾಜೀವ್ ಶುಕ್ಲಾ ಹಾಗೂ ರಾಜಸ್ಥಾನ ವೀಕ್ಷಕರಾಗಿ ಪವನ್ ಬನ್ಸಲ್ ಹಾಗೂ ಟಿ.ಎಸ್. ಸಿಂಗ್ ದೇವ್ ಅವರನ್ನು ನೇಮಕ ಮಾಡಲಾಗಿದೆ.
ಜೂನ್ 10ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳಿಗೆ ರಂದೀಪ್ ಸಿಂಗ್ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಹರಿಯಾಣದ ಒಂದು ಸ್ಥಾನಕ್ಕೆ ಅಜಯ್ ಮಕೇನ್ ಹಾಗೂ ಮಹಾರಾಷ್ಟ್ರದ ಒಂದು ಸ್ಥಾನಕ್ಕೆ ಇಮ್ರಾನ್ ಪ್ರತಾಪ್‌ಘರ್ಹಿ ಅವರಿಗೆ ಮಣೆ ಹಾಕಲಾಗಿದೆ.
-
Rajya Sabha polls | Congress appoints Mallikarjun Kharge as the observer for Maharashtra, Pawan Kumar Bansal & TS Singhdeo appointed for Rajasthan, Bhupesh Baghel & Rajeev Shukla for Haryana. pic.twitter.com/qpdSeLE5JC
— ANI (@ANI) June 5, 2022 " class="align-text-top noRightClick twitterSection" data="
">Rajya Sabha polls | Congress appoints Mallikarjun Kharge as the observer for Maharashtra, Pawan Kumar Bansal & TS Singhdeo appointed for Rajasthan, Bhupesh Baghel & Rajeev Shukla for Haryana. pic.twitter.com/qpdSeLE5JC
— ANI (@ANI) June 5, 2022Rajya Sabha polls | Congress appoints Mallikarjun Kharge as the observer for Maharashtra, Pawan Kumar Bansal & TS Singhdeo appointed for Rajasthan, Bhupesh Baghel & Rajeev Shukla for Haryana. pic.twitter.com/qpdSeLE5JC
— ANI (@ANI) June 5, 2022
ಆದರೆ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಹೊರಗಿನವರಿಗೆ ಟಿಕೆಟ್ ನೀಡಿರುವ ಬಗ್ಗೆ ಕಾಂಗ್ರೆಸ್ ಆಂತರಿಕ ಭಿನ್ನಮತ ಎದುರಿಸುತ್ತಿದೆ. ಈ ನಡುವೆ ಬಿಜೆಪಿ ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನಿಸುತ್ತಿದೆ.
ಹೀಗಾಗಿ, ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಹರಿಯಾಣದ 31 ಶಾಸಕರನ್ನು ಛತ್ತೀಸ್ಗಢಕ್ಕೆ ಶಿಫ್ಟ್ ಮಾಡಲಾಗಿದೆ. ಇತ್ತ ರಾಜ್ಯಸ್ಥಾನದ ಶಾಸಕರನ್ನು ಜೈಪುರನಿಂದ ಉದಯಪುರ್ಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: 'ಹೊರಗಿನವರಿಗೆ' ಟಿಕೆಟ್ ಹಂಚಿಕೆ ಬಿಸಿ ನಡುವೆ ಕುದುರೆ ವ್ಯಾಪಾರದ ಭೀತಿ: ರೆಸಾರ್ಟ್ ಮೊರೆ ಹೋದ ಕೈ ಶಾಸಕರು!