ಜುನಾಗಡ್(ರಾಜಸ್ಥಾನ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಹಲವು ರಾಜ್ಯಗಳಲ್ಲಿ ಇಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿವೆ.
ತಮ್ಮ ರಾಜ್ಯದಲ್ಲೂ ಲಾಕ್ಡೌನ್ ಆಗಬಹುದು ಎಂಬ ಭಯದಲ್ಲಿ ರಾಜಸ್ಥಾನದ ಜುನಾಗಡ್ದಲ್ಲಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ತಂಬಾಕು ವ್ಯಸನಿಗಳು ಅಂಗಡಿ ಹೊರಗೆ ಸರತಿ ಸಾಲಿನಲ್ಲಿ ನಿಂತು ತಂಬಾಕು ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಮೊದಲನೇ ಹಂತದ ಲಾಕ್ಡೌನ್ ಘೋಷಣೆ ಮಾಡಿದ್ದ ವೇಳೆ, ತಾವು ಸಂಕಷ್ಟ ಅನುಭವಿಸಿರುವ ಕಾರಣ ಇದೀಗ ತಮಗೆ ಬೇಕಾದ ಉತ್ಪನ್ನ ಖರೀದಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ವಿಷವರ್ತುಲ: ವೈಜ್ಞಾನಿಕ ಕಾದಂಬರಿಕಾರ ಅನೀಶ್ ದೇಬ್ ನಿಧನ
ಕರ್ನಾಟಕ,ನವದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ಕಠಿಣ ನಿರ್ಬಂಧ ವಿಧಿಸಲಾಗಿದ್ದು, ಮನೆಬಿಟ್ಟು ಹೊರಗೆ ಬರುವವರ ಮೇಲೆ ಪೊಲೀಸರು ಹಲ್ಲೆ ನಡೆಸುವಂತಹ ಘಟನೆಗಳು ಸಹ ನಡೆಯುತ್ತಿವೆ.