ETV Bharat / bharat

ಕೊರೊನಾ ವೈರಾಣು ಪಸರಿಸಿದ್ದು ಚೀನಾದ ವುಹಾನ್​ ಲ್ಯಾಬ್​ನಿಂದ: ಅಮೆರಿಕದ ಎಫ್​ಬಿಐ - Corona virus spread report

ಕೊರೊನಾ ವೈರಸ್​ ಮೂಲ ಚೀನಾ ರಾಷ್ಟ್ರವಾಗಿದೆ. ವುಹಾನ್​ ಪ್ರಯೋಗಾಲಯದಿಂದಲೇ ಅದು ಪ್ರಸಾರವಾಗಿದೆ. ಬಳಿಕ ಅದು ಇಡೀ ವಿಶ್ವವನ್ನು ಪಸರಿಸಿತು ಎಂದು ಅಮೆರಿಕದ ತನಿಖಾ ಸಂಸ್ಥೆಯಾದ ಎಫ್​ಬಿಐ ನಿರ್ದೇಶಕರು ಹೇಳಿದ್ದಾರೆ.

ಕೊರೊನಾ ವೈರಾಣು
ಕೊರೊನಾ ವೈರಾಣು
author img

By

Published : Mar 1, 2023, 1:40 PM IST

ವಾಷಿಂಗ್ಟನ್: ವಿಶ್ವವನ್ನೇ ಕಾಡಿದ ಕೊರೊನಾ ವೈರಾಣು ಚೀನಾದ ವುಹಾನ್‌ನಲ್ಲಿನ ಲ್ಯಾಬ್​ನಿಂದ ಸೋರಿಕೆಯಾಗಿದೆ ಎಂದು ಅಮೆರಿಕದ ಅಧ್ಯಯನ ವರದಿ ಹೇಳಿದ ಬೆನ್ನಲ್ಲೇ, ಅಲ್ಲಿನ ಸರ್ಕಾರಿ ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕ್ರಿಸ್ಟೋಫರ್ ವ್ರೇ ಇದನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿ, COVID-19 ಸಾಂಕ್ರಾಮಿಕದ ಮೂಲವು ಚೀನಾದ ವುಹಾನ್‌ನಲ್ಲಿನ ಲ್ಯಾಬ್ ಆಗಿರುವುದನ್ನು ಎಫ್​ಬಿಐ ನಿರ್ಣಯಿಸಿದೆ ಎಂದು ಹೇಳಿದ್ದಾರೆ.

"ಸಾಂಕ್ರಾಮಿಕ ರೋಗದ ಮೂಲ ವುಹಾನ್‌ ಲ್ಯಾಬ್​ನ ಅಚಾತುರ್ಯವಾಗಿದೆ. ಇದನ್ನು ಎಫ್​ಬಿಐ ನಿರ್ಣಯಿಸಿದೆ. ಚೀನೀ ಸರ್ಕಾರ ಇದನ್ನು ಅಲ್ಲಗಳೆದಿದೆ ಎಂಬುದು ನಮ್ಮ ಗಮನಕ್ಕಿದೆ. ಆದರೆ, ನಮ್ಮ ಅಧ್ಯಯನದಲ್ಲಿ ಅದು ದೃಢಗೊಂಡಿದೆ. ನಮ್ಮ ನಿಕಟ ವಿದೇಶಿ ಪಾಲುದಾರ ರಾಷ್ಟ್ರ ಚೀನಾದ ಸಮರ್ಥನೆಯನ್ನು ಅಲ್ಲಗಳೆಯಲಾಗುವುದು'' ಎಂದು ಹೇಳಿದ್ದಾರೆ.

ಕೊರೊನಾ ಮೂಲದ ಬಗ್ಗೆ ಡಿಪಾರ್ಟ್​ಮೆಂಟ್​ ಆಫ್​ ಪವರ್​ ನಡೆಸಿದ ಅಧ್ಯಯನ ಕೆಲ ದಿನಗಳ ಹಿಂದೆ ವರದಿ ನೀಡಿತ್ತು. ಅದರಲ್ಲಿ ಚೀನಾದಿಂದಲೇ ವೈರಾಣು ಪ್ರಸಾರವಾಗಿದೆ ಎಂದು ಹೇಳಿತ್ತು. ವರದಿಯನ್ನು ಶ್ವೇತಭವನಕ್ಕೆ ನೀಡಿ, ಸೆನೆಟ್ ಸದಸ್ಯರಿಗೆ ಹಂಚಿಕೆ ಮಾಡಲಾಗಿತ್ತು. ಸಾಂಕ್ರಾಮಿಕ ರೋಗದ ಮೂಲದ ಬಗ್ಗೆ ತಮ್ಮದೇ ಆದ ತನಿಖೆಗಳನ್ನು ನಡೆಸಲು ಅಧ್ಯಕ್ಷ ಜೋ ಬೈಡನ್​ ಅವರು ಗುಪ್ತಚರ ಸಂಸ್ಥೆಗಳನ್ನು ಕೋರಿತ್ತು.

ಚೀನಾದ ಪ್ರಯೋಗಾಲಯದಲ್ಲಿ ಸಂಭವಿಸಿದ ಅಚಾತುರ್ಯದಿಂದ ವೈರಸ್ ಹರಡಿದೆ ಎಂಬ ಡಿಪಾರ್ಟ್​ಮೆಂಟ್​ ಆಫ್​ ಪವರ್​ ವರದಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ಗೆ ಸೇರಿದೆ. ಈ ಅಧ್ಯಯನ ಬುದ್ಧಿವಂತಿಕೆಯ ಫಲಿತಾಂಶವಾಗಿದೆ ಮತ್ತು ಗಮನಾರ್ಹವಾಗಿದೆ. ಸಂಸ್ಥೆಯು ಗಣನೀಯ ವೈಜ್ಞಾನಿಕ ಪರಿಣತಿಯನ್ನು ಹೊಂದಿದ್ದು, ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯಗಳ ಮೇಲ್ವಿಚಾರಣೆ ಮಾಡುತ್ತದೆ ಎಂದು ಎಫ್​ಬಿಐ ನಿರ್ದೇಶಕರು ಹೇಳಿದ್ದಾರೆ.

ಅಮೆರಿಕದ ಅಧ್ಯಯನ ವರದಿಯಲ್ಲೇನಿದೆ: ಕೊರೊನಾ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ ಎಂದು ಯುಎಸ್​ ಡಿಪಾರ್ಟ್​ಮೆಂಟ್​ ಆಫ್​ ಎನರ್ಜಿ ತನ್ನ ವರ್ಗೀಕರಿಸಿದ ವರದಿಯನ್ನು ಶ್ವೇತಭವನಕ್ಕೆ ನೀಡಿತ್ತು. ವೈರಾಣು ಮೂಲದ ಕುರಿತು ಅಧ್ಯಯನ ನಡೆಸಿದ್ದ ಸಂಸ್ಥೆ ಕೋವಿಡ್ -19 ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಅಚಾನಕ್ಕಾಗಿ ಹರಡಿರಬಹುದು. ಅದು ಬಳಿಕ ಇಡೀ ವಿಶ್ವಾದ್ಯಂತ ವ್ಯಾಪಿಸಿತು ಎಂದು ಹೇಳಿದೆ.

ರಾಷ್ಟ್ರೀಯ ಗುಪ್ತಚರ ಸಮಿತಿಯ ಈ ವರದಿಯನ್ನು ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಇತರ ನಾಲ್ಕು ಏಜೆನ್ಸಿಗಳು ಸಹಮತಿಸಿದರೆ, ಇನ್ನೂ ಎರಡು ಯಾವುದೇ ಒಮ್ಮತಕ್ಕೆ ಬಂದಿಲ್ಲ. ಈ ಹಿಂದೆಯೂ ಸಹ 2021 ರಲ್ಲಿ ನಡೆಸಿದ ಅಧ್ಯಯನಲ್ಲಿ ಚೀನಾದಲ್ಲಿ ಲ್ಯಾಬ್​ನಿಂದಲೇ ಕೊರೊನಾ ವೈರಸ್​ ಸೋರಿಕೆಯಾಗಿ ಸಾಂಕ್ರಾಮಿಕ ರೋಗ ಹರಡಿದೆ ಎಂದು ಎಫ್‌ಬಿಐ ಹೇಳಿದೆ.

ಚೀನಾದ ವುಹಾನ್​ನಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೊನಾ ವೈರಸ್​ ಕಾಣಿಸಿಕೊಂಡಿತ್ತು. ಸೋಂಕು ಪಸರಿಸಿದ ಬಳಿಕ ಅದರ ತಡೆಗಾಗಿ ಚೀನಾ ಸರ್ಕಾರ ಅತ್ಯಂತ ಕಠಿಣವಾದ ಲಾಕ್‌ಡೌನ್‌ಗಳು, ಸಂಪರ್ಕ ನಿಷೇಧ, ಪ್ರಯಾಣದ ನಿರ್ಬಂಧಗಳನ್ನು ಜಾರಿಗೊಳಿಸಿತ್ತು.

ಚೀನಾ ತನ್ನ ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿದೆ ಎಂದು ಘೋಷಿಸುವುದಕ್ಕೆ ಮೊದಲೇ ಕೊರೊನಾ ಸೋಂಕು ಹರಡಿತ್ತು ಎಂದು ಡಾಯ್ಚ್ ವೆಲ್ಲೆ(ಡಿಡಬ್ಲ್ಯೂ) ಈ ಕುರಿತು ಅಧ್ಯಯನ ನಡೆಸಿ ಹೇಳಿತ್ತು. ಚೀನಾ ವರದಿ ಮಾಡಿದ್ದಕ್ಕಿಂತ ಎರಡು ತಿಂಗಳ ಹಿಂದೆಯೇ ವೈರಸ್ ಕಾಣಿಸಿಕೊಂಡಿತ್ತು ಎಂದು ಅದು ತಿಳಿಸಿತ್ತು. ಬ್ರಿಟನ್​ನ ಕೆಂಟ್ ವಿಶ್ವವಿದ್ಯಾಲಯದ ಸಂಶೋಧನೆಯೊಂದರ ತಂತ್ರಗಳನ್ನು ಅನುಸರಿಸಿ ಅಧ್ಯಯನ ನಡೆಸಿ ಡಾಯ್ಟ್​ ವೆಲ್ಲೆ, ಅಕ್ಟೋಬರ್ ಅಥವಾ ನವೆಂಬರ್ ಮಧ್ಯಭಾಗದಲ್ಲಿ ಚೀನಾದಲ್ಲಿ ಕೋವಿಡ್ ಕಾಣಿಸಿರಬಹುದೆಂದು ಅಂದಾಜು ಮಾಡಿದೆ.

ಪಿಎಲ್​ಒಎಸ್​ ಪ್ಯಾಥೋಜೆನ್ಸ್ ಜರ್ನಲ್ ಕೊರೊನಾ ವೈರಸ್ ಬಗ್ಗೆ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ. ನವೆಂಬರ್ 17, 2019ರಂದೇ ಕೊರೊನಾ ವೈರಸ್ ಚೀನಾದಲ್ಲಿ ಪತ್ತೆಯಾಗಿತ್ತು ಎಂದು ವರದಿ ಮಾಡಿದೆ. ಆದರೆ, ಚೀನಾ ಡಿಸೆಂಬರ್ 2019ರಲ್ಲಿ ವೈರಸ್ ಕಾಣಿಸಿದೆ ಎಂದು ಅಧಿಕೃತವಾಗಿ ಹೇಳಿದೆ. ವುಹಾನ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ: ಚೀನಾದ ಲ್ಯಾಬ್​ನಿಂದಲೇ ಕೊರೊನಾ ವೈರಾಣು ಪ್ರಸಾರ: ಅಮೆರಿಕದ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.