ETV Bharat / bharat

ಮಗನಿಗೆ ಕಚ್ಚಿದ ಎರಡು ಸರ್ಪಗಳು: ಚಿಕಿತ್ಸೆ ಕೊಡಿಸಲು ಹಾವುಗಳ ಸಮೇತ ಆಸ್ಪತ್ರೆಗೆ ಬಂದ ತಂದೆ - ಹಾವುಗಳ ಸಮೇತ ಆಸ್ಪತ್ರೆಗೆ ಬಂದ ತಂದೆ

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಮಗನಿಗೆ ಕಚ್ಚಿದ ಎರಡು ಹಾವುಗಳೊಂದಿಗೆ ತಂದೆಯೊಬ್ಬ ಆಸ್ಪತ್ರೆಗೆ ತೆರಳಿ, ಜನರನ್ನು ಬೆಚ್ಚಿ ಬೀಳಿಸಿದ್ದಾರೆ.

father-went-to-the-hospital-for-son-treatment-with-two-snakes-that-bit-his-son
ಮಗನಿಗೆ ಕಚ್ಚಿದ ಎರಡು ಸರ್ಪಗಳು: ಚಿಕಿತ್ಸೆ ಕೊಡಿಸಲು ಹಾವುಗಳ ಸಮೇತ ಆಸ್ಪತ್ರೆಗೆ ಬಂದ ತಂದೆ
author img

By

Published : Oct 8, 2022, 10:45 PM IST

ತಿರುವಳ್ಳೂರು (ತಮಿಳುನಾಡು): ತನ್ನ ಮಗನಿಗೆ ಕಚ್ಚಿದ ಎರಡು ಹಾವುಗಳೊಂದಿಗೆ ತಂದೆಯೊಬ್ಬ ಆಸ್ಪತ್ರೆಗೆ ಹೋದ ವಿಚಿತ್ರ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಆಸ್ಪತ್ರೆಯಲ್ಲಿ ಕೆಲ ಕಾಲ ಭೀತಿಯ ವಾತಾವರಣ ಕೂಡ ನಿರ್ಮಾಣವಾಗಿತ್ತು.

ಇಲ್ಲಿನ ತಿರುತ್ತಣಿ ಪಕ್ಕದ ಕೊಲ್ಲ ಕುಪ್ಪಂ ಗ್ರಾಮದ ಎಲ್ಲಮ್ಮಾಳ್ ಮತ್ತು ಮಣಿ ದಂಪತಿಯ ಮಗ, 7 ವರ್ಷದ ಮುರುಗನ್ ಎಂಬ ಬಾಲಕನಿಗೆ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಎರಡು ಹಾವುಗಳು ಕಚ್ಚಿವೆ. ಇದನ್ನು ನೋಡಿದ ಮಣಿ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ, ಎರಡು ಹಾವುಗಳನ್ನೂ ಹೊಡೆದಿದ್ದಾರೆ. ವಿಚಿತ್ರ ಎಂದರೆ ಎರಡೂ ಹಾವುಗಳೊಂದಿಗೆ ತನ್ನ ಮಗನನ್ನು ಚಿಕಿತ್ಸೆಗಾಗಿ ತಿರುತ್ತಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಇದನ್ನೂ ಓದಿ: ಒಂದು ಹುಲಿ.. 9 ಜನ ಬಲಿ... 30 ದಿನ, 700 ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆ

ಇಷ್ಟೇ ಅಲ್ಲ, ಹೆಚ್ಚಿನ ಚಿಕಿತ್ಸೆಗಾಗಿ ಮಗನೊಂದಿಗೆ ಕೈಯಲ್ಲಿ ಹಾವುಗಳನ್ನು ಹಿಡಿದುಕೊಂಡೇ ತಿರುವಳ್ಳುವರ್ ಚೀಫ್ ಮೆಡಿಕಲ್ ಕಾಲೇಜು ಆಸ್ಪತ್ರೆಗೂ ತೆರಳಿದ್ದಾರೆ. ಸದ್ಯಕ್ಕೆ ಬಾಲಕನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಅಬ್ಬಬ್ಬಾ 1 ಕೋಟಿ ಮೌಲ್ಯದ 22 ಭೋಲಾ ಮೀನುಗಳು ಬಲೆಗೆ.. ಏನಿದರ ವಿಶೇಷತೆ? ಏಕಿಷ್ಟು ಬೆಲೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.