ಬರೇಲಿ(ಉತ್ತರ ಪ್ರದೇಶ): ಆಸ್ಪತ್ರೆಯ 4ನೇ ಮಹಡಿಯಿಂದ 9 ವರ್ಷದ ಮಗನ ಎಸೆದಿರುವ ಪಾಪಿ ತಂದೆಯೊಬ್ಬ ತಂದನಂತರ ತಾನು ಅಲ್ಲಿಂದ ಜಿಗಿದಿರುವ ಘಟನೆ ಬರೇಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಗಂಗಾಶೀಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದರ ಮಧ್ಯೆ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಕೂಡ ಕೆಲವೊಂದು ಗಂಭೀರ ಆರೋಪ ಕೇಳಿ ಬರಲು ಶುರುವಾಗಿವೆ.
ಜೂನ್ 15ರಂದು ಬರೇಲಿಯಲ್ಲಿರುವ ಆಸ್ಪತ್ರೆಗೆ 35 ವರ್ಷದ ದೀಪಕ್ನನ್ನು ದಾಖಲು ಮಾಡಲಾಗಿತ್ತು. ಮದ್ಯಪಾನ ವ್ಯಸನಿಯಾಗಿದ್ದ ಕಾರಣ ಅದನ್ನ ಬಿಡಿಸುವ ಉದ್ದೇಶದಿಂದ ಹಾಗೂ ಮಾನಸಿಕ ಕಾಯಿಲೆಗೋಸ್ಕರ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು 9 ವರ್ಷದ ಮಗ ತನ್ನ ಚಿಕ್ಕಮ್ಮನೊಂದಿಗೆ ತಂದೆಯನ್ನ ನೋಡಲು ಆಗಮಿಸಿದ್ದ. ಈ ವೇಳೆ, ಇದ್ದಕ್ಕಿದ್ದಂತೆ ದೀಪಕ್ ತನ್ನ ಮಗನನ್ನ ನಾಲ್ಕನೇ ಮಹಡಿಯ ಕಿಟಕಿಯಿಂದ ಹೊರಗೆ ಎಸೆದಿದ್ದಾನೆ. ಇದರ ಬೆನ್ನಲ್ಲೇ ತಾನೂ ಅಲ್ಲಿಂದ ಜಿಗಿದಿದ್ದಾನೆ.
ದೀಪಕ್ ಪತ್ನಿ ಕಾಂಚನ್ ತನ್ನ ಗಂಡನ ಕುಡಿತದಿಂದ ಅಸಮಾಧಾನಗೊಂಡಿದ್ದಳು. ಇದೇ ಕಾರಣಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದಳು. ಇದಾದ ಬಳಿಕ ದೀಪಕ್ ಸಂಜಯ್ ನಗರದಲ್ಲಿ ತಾಯಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದನು. ಕುಡಿತದ ಚಟ ಬಿಡಿಸುವ ಉದ್ದೇಶದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಆತನನ್ನು ಡಿಸ್ಚಾರ್ಜ್ ಸಹ ಮಾಡಬೇಕಾಗಿತ್ತು.ಇದನ್ನೂ ಓದಿ: ಮಾವನ ಬದಲು ಅಳಿಯ ಪೊಲೀಸ್... ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಈ ಮಧ್ಯೆ ಈ ದುರ್ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೋಸ್ಕರ ರವಾನೆ ಮಾಡಿದ್ದಾರೆ.